ಬುಧವಾರ, ಜೂನ್ 23, 2021
23 °C
ಧ್ರುವನಾರಾಯಣ ₨ 3.13 ಕೋಟಿ ಒಡೆಯ

ಐದು ವರ್ಷದಲ್ಲಿ ಆಸ್ತಿ ದ್ವಿಗುಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಚಾಮರಾಜ­ನಗರ ಲೋಕಸಭಾ ಕ್ಷೇತ್ರದ (ಪರಿಶಿಷ್ಟ ಜಾತಿ ಮೀಸಲು) ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ­ಯಾಗಿ ನಾಮಪತ್ರ ಸಲ್ಲಿಸಿರುವ ಆರ್‌. ಧ್ರುವನಾರಾಯಣ ಅವರ ಆಸ್ತಿಯು ಐದು ವರ್ಷದಲ್ಲಿ ದ್ವಿಗುಣಗೊಂಡಿದೆ.2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರತ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ­ಪತ್ರ­ದಲ್ಲಿ ಅವರ ಚರಾಸ್ತಿಯ ಮೌಲ್ಯ ₨ 47,88,019 ಇತ್ತು. ಸ್ಥಿರಾಸ್ತಿಯ ಮೌಲ್ಯ ₨ 1.13 ಕೋಟಿ ಇತ್ತು.  ಒಟ್ಟು ₨ 1,60,88,019 ಮೌಲ್ಯದ ಆಸ್ತಿಗೆ ಒಡೆಯರಾಗಿದ್ದರು.ಈ ಬಾರಿ ಸಲ್ಲಿಸಿರುವ ಪ್ರಮಾ­ಣ­­ಪತ್ರದಲ್ಲಿ ಅವರ ಚರಾಸ್ತಿಯ ಮೌಲ್ಯ ₨ 91,82,564 ಇದೆ. ಜತೆಗೆ, ₨ 2.22 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿ­ದ್ದಾರೆ.ಬೆಂಗಳೂರು ಕೃಷಿ ವಿವಿಯಲ್ಲಿ ಸ್ನಾತ­ಕೋತ್ತರ ಪದವಿ ಪಡೆದಿರುವ ಅವರ ಬಳಿ ಯಾವುದೇ ಚಿನ್ನಾಭರಣ ಇಲ್ಲ. ಮೈಸೂ­ರಿನ ವಿಜಯನಗರದ 4ನೇ ಹಂತದಲ್ಲಿ ಅವರಿಗೆ 50x80 ಅಳತೆಯ ನಿವೇಶನ ಕೊಡುಗೆಯಾಗಿ ಲಭಿಸಿದೆ. ಇಲ್ಲಿ 3,853 ಅಡಿಯಲ್ಲಿ ಮನೆ ನಿರ್ಮಿಸಿದ್ದು, ಇದರ ಪ್ರಸಕ್ತ ಮಾರುಕಟ್ಟೆ ಮೌಲ್ಯ ₨ 1.50 ಕೋಟಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.