ಐನ್‌ಸ್ಟೀನ್ ದೇವರ ಪತ್ರ ಲಿಲಾವಿಗೆ

7

ಐನ್‌ಸ್ಟೀನ್ ದೇವರ ಪತ್ರ ಲಿಲಾವಿಗೆ

Published:
Updated:
ಐನ್‌ಸ್ಟೀನ್ ದೇವರ ಪತ್ರ ಲಿಲಾವಿಗೆ

ವಾಷಿಂಗ್ಟನ್ (ಪಿಟಿಐ): ಮೇಧಾವಿ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್, ದೇವರ ಅಸ್ತಿತ್ವ ಪ್ರಶ್ನಿಸಿ ಪ್ರಸ್ತಾಪಿಸಿದ ಕೈಬರವಣಿಗೆಯ ಪತ್ರವನ್ನು ಆನ್‌ಲೈನ್ ಮೂಲಕ ಹರಾಜಿಗೆ ಇಡಲಾಗಿದೆ.`ದೇವರ ಪತ್ರ~ (ಗಾಡ್ ಲೆಟರ್) ಎಂದೇ ಹೆಸರಾದ ಜರ್ಮನ್ ಭಾಷೆಯಲ್ಲಿರುವ ಈ ಪತ್ರವನ್ನು ಐನ್‌ಸ್ಟೀನ್ ತಮ್ಮ ಸಾವಿಗಿಂತ ಒಂದು ವರ್ಷ ಮುನ್ನ, ಅಂದರೆ 1955ರಲ್ಲಿ ಬರೆದಿದ್ದರು. ಧರ್ಮ, ದೇವರು ಇತ್ಯಾದಿ ಪ್ರಸ್ತಾಪ ಈ ಪತ್ರದಲ್ಲಿದೆ. ಈಗ ಈ ಪತ್ರದ ಹರಾಜಿಗೆ 30 ಲಕ್ಷ ಡಾಲರ್‌ಗಳನ್ನು ಕನಿಷ್ಠ ದರವಾಗಿ ನಿಗದಿ ಮಾಡಲಾಗಿದೆ.ಐನ್‌ಸ್ಟೀನ್, ತತ್ವಜ್ಞಾನಿ ಎರಿಕ್ ಗಟ್‌ಕೈಂಡ್ ಅವರಿಗೆ ಪ್ರಿನ್ಸ್‌ಟನ್ ವಿವಿ ಲೆಟರ್ ಹೆಡ್‌ನಲ್ಲಿ ಈ ಪತ್ರ ಬರೆದಿದ್ದರು.

`ನನ್ನ ಮಟ್ಟಿಗೆ ಹೇಳುವುದಾದರೆ ದೇವರು ಎಂಬ ಪದವು ಮಾನವ ದೌರ್ಬಲ್ಯಗಳ ಫಲಿತ ಮೊತ್ತವೆಂಬಂತೆಯೇ ತೋರುತ್ತದೆ...~ ಎಂದೂ ಐನ್‌ಸ್ಟೀನ್ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry