ಐನ್‌ಸ್ಟೀನ್ ಹಿಂದಿಕ್ಕಿದ ಬಾಲೆಯ ಬೌದ್ಧಿಕ ಪ್ರತಿಭೆ

7

ಐನ್‌ಸ್ಟೀನ್ ಹಿಂದಿಕ್ಕಿದ ಬಾಲೆಯ ಬೌದ್ಧಿಕ ಪ್ರತಿಭೆ

Published:
Updated:

ಲಂಡನ್ (ಪಿಟಿಐ): ಬ್ರಿಟನ್ನಿನ 12 ವರ್ಷದ ಶಾಲಾ ಬಾಲೆಯೊಬ್ಬಳು ಬುದ್ಧಿಮತ್ತೆ ಪರೀಕ್ಷೆಯಲ್ಲಿ ಮೇಧಾವಿ ವಿಜ್ಞಾನಿಗಳಾದ ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ಅವರನ್ನು ಹಿಂದಿಕ್ಕಿದ್ದಾಳೆ!ಬೌದ್ಧಿಕ ಮಾಪನ ಪರೀಕ್ಷೆಯೊಂದರಲ್ಲಿ 162 ಗುಣಾಂಕಗಳನ್ನು ಪಡೆದಿರುವ ಲಿವರ್‌ಪೂಲ್ ನಗರದ ಒಲಿವಿಯಾ ಮ್ಯಾನಿಂಗ್ ಎಂಬ ಪೋರಿಯೇ ಈ ಸಾಧನೆ ಮಾಡಿರುವ ಬಾಲೆ.ಈಕೆಯ ಬೌದ್ಧಿಕ ಮಟ್ಟದ ಗುಣಾಂಕ ಐನ್‌ಸ್ಟೀನ್ ಹಾಗೂ ಹಾಕಿಂಗ್ ಅವರ ಬುದ್ಧಿಮತ್ತೆಗೆ ಹೋಲಿಸಿದರೆ 2 ಗುಣಾಂಕಗಳಷ್ಟು ಜಾಸ್ತಿ ಇದೆ. ಈ ಇಬ್ಬರು ವಿಜ್ಞಾನಿಗಳ ಬೌದ್ಧಿಕ ಗುಣಾಂಕ 160 ಇತ್ತು.  ಇದರೊಂದಿಗೆ ಜಗತ್ತಿನಲ್ಲಿರುವ ಪ್ರಚಂಡ ಬುದ್ಧಿಮತ್ತೆಯ ಶೇ 1ರಷ್ಟು ಜನರ ಸಾಲಿಗೆ ಒಲಿವಿಯಾ ಸೇರಿದ್ದಾಳೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry