ಶನಿವಾರ, ಮೇ 15, 2021
24 °C

ಐಪಿಎಲ್‌ಗೆ ಪ್ರತ್ಯೇಕ ಕಾಲಾವಕಾಶ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಆಯೋಜಿಸಲು ಪ್ರತ್ಯೇಕ ಕಾಲಾವಕಾಶ ಮಾಡಿಕೊಡಬೇಕು ಎಂಬ ಸಲಹೆಯನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ನೀಡಿದ್ದಾರೆ.ಅದಕ್ಕೆ ಅವರು ನ್ಯೂಜಿಲೆಂಡ್ ತಂಡದ ಉದಾಹರಣೆ ನೀಡಿದ್ದಾರೆ. ಈ ತಂಡದವರು ಐಪಿಎಲ್ ಅವಧಿಯಲ್ಲಿ ಯಾವುದೇ ಕ್ರಿಕೆಟ್ ಸರಣಿಯಲ್ಲಿ ಆಡುತ್ತಿಲ್ಲ.`ಐಪಿಎಲ್ ಟೂರ್ನಿಯಲ್ಲಿ ಸಿಗುವ ಹಣವನ್ನು ಪರಿಗಣಿಸಿದರೆ, ಇದನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಹಾಗಾಗಿ ಹೆಚ್ಚಿನ ಆಟಗಾರರು ಅಂತರರಾಷ್ಟ್ರೀಯ ಬದ್ಧತೆಯನ್ನು ಬದಿಗೊತ್ತಿ ಐಪಿಎಲ್‌ನಲ್ಲಿ ಆಡಲು ಮುಂದಾಗುತ್ತಾರೆ.ಈ ನಿಟ್ಟಿನಲ್ಲಿ ನ್ಯೂಜಿಲೆಂಡ್ ತಂಡದ ನಿರ್ಧಾರವನ್ನು ಮೆಚ್ಚಬೇಕು. ಹಾಗಾಗಿ ಎಲ್ಲಾ ಕ್ರಿಕೆಟ್ ಮಂಡಳಿಗಳು ಈ ರೀತಿ ತೀರ್ಮಾನ ಕೈಗೊಂಡರೆ ಒಳ್ಳೆಯದು~ ಎಂದು ಪಾಂಟಿಂಗ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.