ಶನಿವಾರ, ಡಿಸೆಂಬರ್ 7, 2019
26 °C

ಐಪಿಎಲ್‌ಗೆ ಯುವಿ ಅನುಮಾನ

Published:
Updated:
ಐಪಿಎಲ್‌ಗೆ ಯುವಿ ಅನುಮಾನ

ನವದೆಹಲಿ (ಪಿಟಿಐ):  ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದು, ಏಪ್ರಿಲ್‌ನಲ್ಲಿ ನಡೆಯಲಿರುವ ಐಪಿಎಲ್ ಐದನೇ ಆವೃತ್ತಿಯಲ್ಲಿ ಆಡುವುದು ಅನುಮಾನವಾಗಿದೆ.ಯುವಿ ಈಗ ಅಮೆರಿಕಾದಲ್ಲಿದ್ದಾರೆ. ಸುಮಾರು ಆರು ತಿಂಗಳು ಅವರು ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. `ಯುವಿ ಮೊದಲು ಇಂಗ್ಲೆಂಡ್‌ಗೆ ತೆರಳಿದ್ದರು. ಬಳಿಕ ಅಲ್ಲಿಂದ ಅಮೆರಿಕಾಕ್ಕೆ ಹೋಗಿದ್ದಾರೆ. ಶ್ವಾಸಕೋಶದಲ್ಲಿನ ಗೆಡ್ಡೆ ತೆಗೆಸಲು ಅವರು ಅಲ್ಲಿಗೆ ತೆರಳಿದ್ದಾರೆ.

 

ಇದಾದ ಮೇಲೆ ಚೇತರಿಸಿಕೊಳ್ಳಳು ಅವರಿಗೆ ಹೆಚ್ಚಿನ ಸಮಯ ಬೇಕು. ಶಸ್ತ್ರಚಿಕಿತ್ಸೆಗೆ ಒಳಗಾಗಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ವೈದ್ಯರು ಸದ್ಯದಲ್ಲೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆದರೆ ಅವರು ಐಪಿಎಲ್ ತಪ್ಪಿಸಿಕೊಳ್ಳುವುದು ಬಹುತೇಕ ಖಚಿತ~ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)