ಬುಧವಾರ, ನವೆಂಬರ್ 20, 2019
24 °C

ಐಪಿಎಲ್‌ನಲ್ಲಿ ಅವಕಾಶದ ಆಮಿಷ; ಕ್ರಿಕೆಟಿಗನ ಬಂಧನ

Published:
Updated:

ಅಹಮದಾಬಾದ್ (ಪಿಟಿಐ): ಐಪಿಎಲ್ ತಂಡಗಳಲ್ಲಿ ಸ್ಥಾನ ಕೊಡಿಸುವುದಾಗಿ ನಂಬಿಸಿ ಹಣ ತೆಗೆದುಕೊಂಡು ಮೋಸ ಮಾಡಿರುವ ಆರೋಪದ ಮೇಲೆ ಗುಜರಾತ್ ಮೂಲದ ಕ್ರಿಕೆಟಿಗ  ಹೆಟಾರ್ತ್ ಗೊಹಿಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಸ್ಥಳೀಯ ಐವರು ಕ್ರಿಕೆಟಿಗರಿಂದ 38 ಲಕ್ಷ ರೂಪಾಯಿ ಪಡೆದಿದ್ದ ಎನ್ನಲಾಗಿದೆ. ಐಪಿಎಲ್ ಮೂರನೇ ಆವೃತ್ತಿಯಲ್ಲಿ ಗೊಹಿಲ್, ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿದ್ದ ಎಂಬುದು ತಿಳಿದುಬಂದಿದೆ.

ಪ್ರತಿಕ್ರಿಯಿಸಿ (+)