`ಐಪಿಎಲ್‌ನಲ್ಲಿ ಆಡದಿರುವುದು ಬೇಸರ ತಂದಿದೆ'

7

`ಐಪಿಎಲ್‌ನಲ್ಲಿ ಆಡದಿರುವುದು ಬೇಸರ ತಂದಿದೆ'

Published:
Updated:

ವೆಲಿಂಗ್ಟನ್ (ಪಿಟಿಐ): ನ್ಯೂಜಿಲೆಂಡ್ ಕ್ರಿಕೆಟಿಗ ಜೆಸ್ಸಿ ರೈಡರ್ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ಬೇಸರಗೊಂಡಿದ್ದಾರೆ ಎಂದು ಅವರ ಮ್ಯಾನೇಜರ್ ಅರೋನ್ ಕ್ಲೀ ಹೇಳಿದ್ದಾರೆ.ಅವರು ಸೋಮವಾರ ಇಲ್ಲಿನ ವಿಮಾನ ನಿಲ್ದಾಣದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ, `ಐಪಿಎಲ್ ಟೂರ್ನಿಯಲ್ಲಿ ಆಡಲು ಅವರು ಕಾತರದಿಂದ ಕಾಯುತ್ತಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಲು ಈ ಟೂರ್ನಿ ಅತ್ಯಂತ ಸೂಕ್ತವಾಗಿತ್ತು' ಎಂದರು.ಕಳೆದ ಗುರುವಾರ ಕ್ರೈಸ್ಟ್‌ಚರ್ಚ್‌ನಲ್ಲಿ ಬಾರ್ ಒಂದರ ಹೊರಗೆ ಕಿಡಿಗೇಡಿಗಳಿಂದ ಗಂಭೀರವಾಗಿ ಹಲ್ಲೆಗೆ ಒಳಗಾಗಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ರೈಡರ್, ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನು ಐಸಿಯುನಿಂದ ಸ್ಥಳಾಂತರಿಸಲಾಗಿದ್ದು, ಸಹಾಯವಿಲ್ಲದೇ ಎದ್ದು ನಿಲ್ಲಲು ಶಕ್ತರಾಗಿದ್ದಾರೆ ಎಂದು ಅರೋನ್ ಕ್ಲೀ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry