ಐಪಿಎಲ್‌ನಲ್ಲಿ ಕಪ್ಪು ಹಣ; ತನಿಖೆಗೆ ಆಗ್ರಹ

7

ಐಪಿಎಲ್‌ನಲ್ಲಿ ಕಪ್ಪು ಹಣ; ತನಿಖೆಗೆ ಆಗ್ರಹ

Published:
Updated:

ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಕಪ್ಪು ಹಣ ಹರಿದಾಡುತ್ತಿರುವ ಆರೋಪದ ಬಗ್ಗೆ ತನಿಖೆ ನಡೆಸಬೇಕು ಎಂದು ಕ್ರೀಡಾ ಸಚಿವ ಅಜಯ್ ಮಾಕನ್ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರಿಗೆ ಒತ್ತಾಯಿಸಿದ್ದಾರೆ.`ಐಪಿಎಲ್‌ನಲ್ಲಿ ಕಪ್ಪು ಹಣ ಹರಿದಾಡುತ್ತಿರುವ ಬಗ್ಗೆ ಶಂಕೆ ಇದೆ. ಹಾಗಾಗಿ ಅದರ ಮೂಲ ಪತ್ತೆ ಹಚ್ಚಬೇಕು. ಅದು ವಿಶೇಷ ಲೆಕ್ಕಪರಿಶೋಧನಾ ತಂಡದಿಂದ ಮಾತ್ರ ಸಾಧ್ಯ~ ಎಂದು ಅವರು ಹೇಳಿದ್ದಾರೆ.ಈ ಸಂಬಂಧ ಕ್ರೀಡಾ ಕಾರ್ಯದರ್ಶಿಯು ಕಳೆದ ವಾರ ಕಂದಾಯ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಮಾಕನ್ ಸೋಮವಾರ ಲೋಕಸಭೆಯಲ್ಲಿ ತಿಳಿಸಿದರು. ಈ ಬಗ್ಗೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಯಿಂದ ತನಿಖೆ ನಡೆಸಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry