ಐಪಿಎಲ್‌ನಿಂದ ಕ್ರಿಕೆಟ್‌ಗೆ ಅಪಾಯ

7

ಐಪಿಎಲ್‌ನಿಂದ ಕ್ರಿಕೆಟ್‌ಗೆ ಅಪಾಯ

Published:
Updated:

ಮೆಲ್ಬರ್ನ್ (ಪಿಟಿಐ):  ಐಪಿಎಲ್‌ನಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಭಾರಿ ಅಪಾಯವಿದೆ ಎಂದು         ವೆಸ್ಟ್‌ಇಂಡೀಸ್ ತಂಡದ ಮಾಜಿ ಆಟಗಾರ ಕಾರ್ಲ್ ಹೂಪರ್ ಆತಂಕ ವ್ಯಕ್ತಪಡಿಸಿದ್ದಾರೆ.`ಸದ್ಯ ಕ್ರಿಕೆಟ್‌ಗಿರುವ ದೊಡ್ಡ ಅಪಾಯವೆಂದರೆ ಅದು  ಐಪಿಎಲ್~ ಎಂದು ಹೇಳಿದ್ದಾರೆ.

ಟ್ವೆಂಟಿ-20 ವಿಶ್ವ ಚಾಂಪಿಯನ್ ಆಗಿರುವ  ವೆಸ್ಟ್‌ಇಂಡೀಸ್ ತಂಡದ ಆಟಗಾರರ ಜೊತೆ ಕ್ರಿಕೆಟ್ ಮಂಡಳಿಯು ಕೇಂದ್ರೀಯ ಗುತ್ತಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಅವರೆಲ್ಲಾ ಐಪಿಎಲ್ ಮೊರೆ ಹೋಗುವ ಸಾಧ್ಯತೆ ಇದೆ ಎಂದೂ ಹೂಪರ್ ನುಡಿದಿದ್ದಾರೆ.ಕೆರಿಬಿಯನ್ ನಾಡಿನ ಕ್ರಿಸ್ ಗೇಲ್ ಈ ಹಿಂದೆ ಐಪಿಎಲ್‌ನಲ್ಲಿ ಆಡಲು ಮುಂದಾಗಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಒಂದು ವರ್ಷ ಅವರು ದೇಶದ ತಂಡದಿಂದ ಹೊರಗುಳಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry