ಬುಧವಾರ, ಜೂನ್ 16, 2021
27 °C
ಐಪಿಎಲ್‌: ಶೇ 60-----–70 ಪಂದ್ಯಗಳು ಭಾರತದಲ್ಲಿ: ಬಿಸ್ವಾಲ್‌

ಐಪಿಎಲ್‌ ತಾಣ: ಹೊರಬೀಳದ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇಂಡಿಯನ್ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಏಳನೇ ಋತುವಿನ ಟೂರ್ನಿಯ ಪಂದ್ಯಗಳು ನಡೆಯುವ ತಾಣಗಳ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರ ಬಿದ್ದಿಲ್ಲ. ಆದರೂ ಹೆಚ್ಚಿನ ಪಂದ್ಯಗಳು ಭಾರತದಲ್ಲೇ ನಡೆಯುವ ಸಾಧ್ಯತೆಯಿದೆ.ಲೋಕಸಭೆ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಐಪಿಎಲ್‌ ವೇಳಾಪಟ್ಟಿಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿತ್ತು. ಲೋಕಸಭೆ ಚುನಾವಣೆ ಏಪ್ರಿಲ್‌ 7 ರಿಂದ ಮೇ 12ರ ವರೆಗೆ ನಡೆಯಲಿದೆ. ಮೇ 16 ರಂದು ಫಲಿತಾಂಶ ಹೊರಬೀಳಲಿದೆ.ಐಪಿಎಲ್‌ನ ತಾಣ ಹಾಗೂ ವೇಳಾಪಟ್ಟಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಬಿಸಿಸಿಐ ಹಿರಿಯ ಅಧಿಕಾರಿಗಳು ಬುಧವಾರ ಇಲ್ಲಿ ಸಭೆ ಸೇರಿದ್ದರು. ‘ಟೂರ್ನಿಯ ಹೆಚ್ಚಿನ ಪಂದ್ಯಗಳನ್ನು ಭಾರತದಲ್ಲಿ ನಡೆಸಬೇಕು’ ಎಂಬ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.ಬಿಸಿಸಿಐ ಅಧ್ಯಕ್ಷ ಎನ್‌. ಶ್ರೀನಿವಾಸನ್‌, ಕಾರ್ಯದರ್ಶಿ ಸಂಜಯ್‌ ಪಟೇಲ್‌, ಹಿರಿಯ ಉಪಾಧ್ಯಕ್ಷ ರಾಜೀವ್‌ ಶುಕ್ಲಾ,  ಐಪಿಎಲ್‌ ಮುಖ್ಯಸ್ಥ ರಂಜಿಬ್‌ ಬಿಸ್ವಾಲ್ ಮತ್ತು ಸಿಇಒ ಸುಂದರ್‌ ರಾಮನ್‌  ಸಭೆಯಲ್ಲಿ ಹಾಜರಿದ್ದರು.‘ಟೂರ್ನಿಯ ಶೇ 60 ರಿಂದ 70 ರಷ್ಟು ಪಂದ್ಯಗಳು ಭಾರತದಲ್ಲೇ ನಡೆಯಲಿದೆ’ ಎಂದು ಬಿಸ್ವಾಲ್‌ ಹೇಳಿದ್ದಾರೆ. ‘ಐಪಿಎಲ್‌ ದೇಸಿ ಟೂರ್ನಿಯಾಗಿರುವ ಕಾರಣ ಸಾಧ್ಯವಿರು ವಷ್ಟು ಪಂದ್ಯಗಳನ್ನು ಭಾರತದಲ್ಲಿ ನಡೆಸಲಾಗುವುದು’ ಎಂದಿದ್ದಾರೆ. ‘ಮೇ 16ರ ಬಳಿಕದ ಪಂದ್ಯಗಳು ಭಾರತದಲ್ಲಿ ನಡೆಯಲಿವೆ’ ಎಂದು ಮಂಡಳಿಯ ಮೂಲಗಳು ತಿಳಿಸಿವೆ.‘ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟಗೊಂಡಿದೆ. ಕೆಲವು ವಿದೇಶಿ ತಾಣಗಳ ಬಗ್ಗೆ ಸಭೆಯಲ್ಲಿ ಚರ್ಚಿಸ ಲಾಯಿತು. ಆದರೆ ಅಂತಿಮ ನಿರ್ಧಾರ ಕೈಗೊಳ್ಳಲು ಇನ್ನೆರಡು ದಿನಗಳು ಬೇಕು. ಟೂರ್ನಿಯ ಹೆಚ್ಚಿನ ಪಂದ್ಯಗಳು ಭಾರತದಲ್ಲೇ ನಡೆಯಲಿದೆ’ ಎಂದು ಬಿಸ್ವಾಲ್‌ ಸಭೆಯ ಬಳಿಕ ತಿಳಿಸಿದ್ದಾರೆ. ಐಪಿಎಲ್‌  ಏಪ್ರಿಲ್‌ 9 ರಿಂದ ಜೂನ್‌ 3ರ ವರೆಗೆ ನಡೆ ಯುವ ಸಾಧ್ಯತೆಯಿದೆ. ಮೇ 16ರ ವರೆಗಿನ ಪಂದ್ಯಗಳನ್ನು ಎಲ್ಲಿ ನಡೆಸಬೇಕು ಎಂಬುದರ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡ ಬಳಿಕವೇ ಟೂರ್ನಿಯ ವೇಳಾಪಟ್ಟಿ ಹೊರಬೀಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.