ಐಪಿಎಲ್: ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್-ಡೆವಿಲ್ಸ್ ಮುಖಾಮುಖಿ

7

ಐಪಿಎಲ್: ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್-ಡೆವಿಲ್ಸ್ ಮುಖಾಮುಖಿ

Published:
Updated:

ಮುಂಬೈ (ಐಎಎನ್‌ಎಸ್): ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ತಂಡಗಳು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಏಪ್ರಿಲ್ ಮೂರರಂದು ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.ನೂತನ ಫ್ರಾಂಚೈಸ್ ತಂಡವಾದ ಹೈದರಾಬಾದ್‌ನ ಸನ್‌ರೈಸರ್ಸ್ ಏಪ್ರಿಲ್ 5ರಂದು ತನ್ನ ತವರು ನೆಲದಲ್ಲಿಯೇ ಪುಣೆ ವಾರಿಯರ್ಸ್ ಎದುರು ಮೊದಲ ಪಂದ್ಯವನ್ನಾಡಲಿದೆ. ಸನ್‌ರೈಸರ್ಸ್ ತಂಡದ ಮೊದಲ ಹೆಸರು ಡೆಕ್ಕನ್ ಚಾರ್ಜರ್ಸ್ ಎಂದಿತ್ತು.ಒಂಬತ್ತು ತಂಡಗಳು ಪಾಲ್ಗೊಳ್ಳಲಿರುವ ಈ ಐಪಿಎಲ್ ರೌಂಡ್ ರಾಬಿನ್‌ಲೀಗ್ ಮಾದರಿಯಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ತಂಡಗಳು `ಪ್ಲೇ ಆಫ್' ಹಂತಕ್ಕೆ ಅರ್ಹತೆ ಪಡೆಯಲಿವೆ. ಧರ್ಮಶಾಲಾ, ರಾಂಚಿ ಸೇರಿದಂತೆ ಒಟ್ಟು 12 ಕ್ರೀಡಾಂಗಣಗಳಲ್ಲಿ ಪಂದ್ಯಗಳು ಜರುಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry