ಬುಧವಾರ, ಮೇ 12, 2021
27 °C

ಐಪಿಎಲ್ ಐದನೇ ಆವೃತ್ತಿಗೆ ಇಂದು ಚಾಲನೆ: ಸಮಾರಂಭಕ್ಕೆ ತಾರಾ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿರುವ ಐಪಿಎಲ್ ಐದನೇ ಆವೃತ್ತಿಗೆ ಮಂಗಳವಾರ ಇಲ್ಲಿ ಚಾಲನೆ ಸಿಗಲಿದ್ದು, ಖ್ಯಾತ ಚಲನಚಿತ್ರ ತಾರೆಯರು ಪಾಲ್ಗೊಳ್ಳಲಿರುವುದು ಈ ಸಮಾರಂಭಕ್ಕೆ ಹೊಸರಂಗು ನೀಡಲಿದೆ.ಇಲ್ಲಿನ ವೈಎಂಸಿಎ ದೈಹಿಕ ಶಿಕ್ಷಣ ಕಾಲೇಜಿನ ಅಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ. ಈ ಸಂದರ್ಭದಲ್ಲಿ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್, ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್ ಹಾಗೂ ಅಮೆರಿಕದ ಪಾಪ್ ಸ್ಟಾರ್ ಕೇಟಿ ಪೆರ‌್ರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.ಪೆರ‌್ರಿ ಇದೇ ಮೊದಲ ಸಲ ಭಾರತದಲ್ಲಿ ಪ್ರದರ್ಶನ ನೀಡಲಿದ್ದಾರೆ. ಆಟಗಾರರನ್ನು ಕಣ್ತುಂಬಿಕೊಳ್ಳುವ ಸಂಭ್ರಮದ ಜೊತೆಗೆ ಪೆರ‌್ರಿಯ ಹಾಡು, ನೃತ್ಯದ ಸೊಬಗನ್ನು ಸವಿಯುವ ಅವಕಾಶ  ಕ್ರಿಕೆಟ್ ಪ್ರೇಮಿಗಳದ್ದಾಗಲಿದೆ.54 ದಿನಗಳ ಈ `ಚುಟುಕು ಕ್ರಿಕೆಟ್~ ಹೋರಾಟದಲ್ಲಿ ಒಂಬತ್ತು ತಂಡಗಳು ಪೈಪೋಟಿ ನಡೆಸಲಿವೆ. ಈ ಸಮಾರಂಭವನ್ನು ವೀಕ್ಷಿಸಲು 1500 ರೂಪಾಯಿಯಿಂದ ಟಿಕೆಟ್ ನಿಗದಿ ಮಾಡಲಾಗಿದೆ.ಒಟ್ಟು 76 ಪಂದ್ಯಗಳು ನಡೆಯಲಿದ್ದು, ಅದರಲ್ಲಿ 72 ಪಂದ್ಯಗಳು ಲೀಗ್ ಪಂದ್ಯಗಳಾಗಿವೆ. ಪ್ರತಿ ತಂಡಗಳು ಎಂಟು ಪಂದ್ಯಗಳನ್ನು ಆಡಲಿದೆ. 12 ವಿವಿಧ ಕ್ರೀಡಾಂಗಣಗಳು ಈ ಟೂರ್ನಿಗೆ ಆತಿಥ್ಯ ನೀಡಲಿವೆ.  ಬೆಂಗಳೂರು ಹಾಗೂ ಚೆನ್ನೈಯಲ್ಲಿ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ. ಐಪಿಎಲ್ ನಾಲ್ಕನೇ ಆವೃತ್ತಿಯಲ್ಲಿ ಒಟ್ಟು 10 ತಂಡಗಳಿದ್ದವು. ಆದರೆ ಈ ಸಲ ಕೊಚ್ಚಿ ಟಸ್ಕರ್ಸ್ ತಂಡವನ್ನು ಬಿಸಿಸಿಐ ರದ್ದುಪಡಿಸಿದೆ.2008ರಲ್ಲಿ ರಾಜಸ್ತಾನ ರಾಯಲ್ಸ್, 2009ರಲ್ಲಿ ಡೆಕ್ಕನ್ ಚಾರ್ಜರ್ಸ್, 2010 ಹಾಗೂ 11ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಚಾಂಪಿಯನ್ ಆಗಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.