ಐಪಿಎಲ್ ಟೂರ್ನಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶುಭಾರಂಭ

7

ಐಪಿಎಲ್ ಟೂರ್ನಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶುಭಾರಂಭ

Published:
Updated:
ಐಪಿಎಲ್ ಟೂರ್ನಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶುಭಾರಂಭ

ಕೊಚ್ಚಿ: ಎಬಿ ಡಿವಿಲಿಯರ್ಸ್ ಅಬ್ಬರಕ್ಕೆ ಕೊಚ್ಚಿ ಟಸ್ಕರ್ಸ್ ಕೇರಳ ತಂಡ ತಬ್ಬಿಬ್ಬಾಯಿತು. ಅಜೇಯ ಅರ್ಧಶತಕ (54, 40 ಎಸೆತ, 1ಬೌಂ, 5 ಸಿಕ್ಸರ್) ಸಿಡಿಸಿದ ವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ರೂವಾರಿ ಎನಿಸಿದರು. ನೆಹರು ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಡೇನಿಯಲ್ ವೆಟೋರಿ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡ ಆರು ವಿಕೆಟ್‌ಗಳಿಂದ ಕೊಚ್ಚಿ ತಂಡವನ್ನು ಮಣಿಸಿತು.



ಮಾಹೇಲ ಜಯವರ್ಧನೆ ನೇತೃತ್ವದ ಕೊಚ್ಚಿ ತಂಡ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 161 ರನ್ ಪೇರಿಸಿದರೆ, ಬೆಂಗಳೂರು ತಂಡ 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 162 ರನ್ ಗಳಿಸಿ ಜಯ ಸಾಧಿಸಿತು. ಸವಾಲಿನ ಗುರಿ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ತಂಡ ತಿಲಕರತ್ನೆ ದಿಲ್ಶಾನ್ (1) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಯುವ ಪ್ರತಿಭೆ ಮಯಾಂಕ್ ಅಗರ್‌ವಾಲ್ (33, 24 ಎಸೆತ, 2 ಬೌಂ. 2 ಸಿಕ್ಸರ್) ಮತ್ತು ವಿರಾಟ್ ಕೊಹ್ಲಿ (23) ತಂಡಕ್ಕೆ ಆಸರೆಯಾದರು.



10 ಓವರ್‌ಗಳು ಕೊನೆಗೊಂಡಾಗ ಚಾಲೆಂಜರ್ಸ್ 3 ವಿಕೆಟ್‌ಗೆ 85 ರನ್ ಗಳಿಸಿತ್ತು. ಬಳಿಕ ಸೌರಭ್ ತಿವಾರಿ (24 ಎಸೆತಗಳಲ್ಲಿ 26) ಅವರು ವಿಲಿಯರ್ಸ್‌ಗೆ ಉತ್ತಮ ಸಾಥ್ ನೀಡಿದರು. ರೈಫಿ ಗೊಮೆಜ್ ಎಸೆದ 18ನೇ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿದ ವಿಲಿಯರ್ಸ್ ಪಂದ್ಯಕ್ಕೆ ತಿರುವು ನೀಡಿದರು. 



ಕೊನೆಯಲ್ಲಿ ಅಸದ್ ಖಾನ್ ಪಠಾಣ್ 4 ಎಸೆತಗಳಲ್ಲಿ 12 ರನ್ ಗಳಿಸಿ ಬೆಂಗಳೂರು ತಂಡದ ಗೆಲುವಿನ ಹಾದಿಯನ್ನು ಸುಲಭಗೊಳಿಸಿದರು. ಮೊದಲು ಬ್ಯಾಟ್ ಮಾಡಿದ ಕೊಚ್ಚಿ ತಂಡ ಬ್ರೆಂಡನ್ ಮೆಕ್ಲಮ್ (45, 32 ಎಸೆತ, 4ಬೌಂ, 2 ಸಿಕ್ಸರ್) ಅವರ ಅಬ್ಬರದ ಆಟದ ನೆರವಿನಿಂದ ಸವಾಲಿನ ಮೊತ್ತ ಪೇರಿಸಿತ್ತು.



ಮೆಕ್ಲಮ್ ಮತ್ತು ಲಕ್ಷ್ಮಣ್ (36) ಮೊದಲ ವಿಕೆಟ್‌ಗೆ 9 ಓವರ್‌ಗಳಲ್ಲಿ 80 ರನ್ ಕಲೆಹಾಕಿದರು. ಈ ಆರಂಭವನ್ನು ನೋಡಿದಾಗ ಕೊಚ್ಚಿ ತಂಡ ಸುಲಭದಲ್ಲಿ 200 ರನ್ ಕಲೆಹಾಕಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಳಿಕ ಬೆಂಗಳೂರು ತಂಡದ ಬೌಲರ್‌ಗಳು ಮೇಲುಗೈ ಸಾಧಿಸಿದರು. ಬ್ರಾಡ್ ಹಾಡ್ಜ್  27 ರನ್‌ಗಳಿಸಿದರೆ, ರವೀಂದ್ರ ಜಡೇಜಾ 16 ಎಸೆತಗಳಲ್ಲಿ ಔಟಾಗದೇ 23 ರನ್ ಕಲೆಹಾಕಿದರು. ವೆಟೋರಿ ನಾಲ್ಕು ಓವರ್‌ಗಳಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟು ಒಂದು ವಿಕೆಟ್ ಪಡೆದರು.



ಸ್ಕೋರ್  ವಿವರ

ಕೊಚ್ಚಿ ಟಸ್ಕರ್ಸ್ ಕೇರಳ 20 ಓವರ್‌ಗಳಲ್ಲಿ ಐದು ವಿಕೆಟ್‌ಗೆ 161

ಬ್ರೆಂಡನ್ ಮೆಕ್ಲಮ್ ಸಿ ಡಿರ್ಕ್ ನಾನೆಸ್ ಬಿ ವಿರಾಟ್ ಕೊಹ್ಲಿ   45

ವಿವಿಎಸ್ ಲಕ್ಷ್ಮಣ್ ಸಿ ಪೂಜಾರಾ ಬಿ ದಿಲ್ಶಾನ್  36

ಮಾಹೇಲ ಜಯವರ್ಧನೆ ಸ್ಟಂಪ್ಡ್ ಡಿವಿಲಿಯರ್ಸ್ ಬಿ ವೆಟೋರಿ 18

ಬ್ರಾಡ್ ಹಾಡ್ಜ್ ಬಿ ಜಹೀರ್ ಖಾನ್  27

ರವೀಂದ್ರ ಜಡೇಜಾ ಔಟಾಗದೇ  23

ರೈಫಿ ಗೊಮೆಜ್ ಸಿ ತಿವಾರಿ ಬಿ ಡಿರ್ಕ್ ನಾನೆಸ್  00

ಪಾರ್ಥಿವ್ ಪಟೇಲ್ ಔಟಾಗದೇ  01

ಇತರೆ (ಬೈ-1, ವೈಡ್- 7, ನೋಬಾಲ್ -1, ಲೆಗ್‌ಬೈ- 2)  11

ವಿಕೆಟ್ ಪತನ: 1-80 (ಲಕ್ಷ್ಮಣ್), 2-93 (ಮೆಕ್ಲಮ್). 3-124 (ಜಯವರ್ಧನೆ), 4-147 (ಬ್ರಾಡ್ ಹಾಡ್ಜ್), 5-152 (ರೈಫಿ ಗೊವೆುಜ್).

ಬೌಲಿಂಗ್: ಜಹೀರ್ ಖಾನ್ 4-0-28-1, ಡಿರ್ಕ್ ನಾನೆಸ್ 3-0-31-1, ಡೇನಿಯಲ್ ವೆಟೋರಿ 4-0-17-1, ತಿಲಕರತ್ನೆ ದಿಲ್ಶಾನ್ 4-0-30-1, ಅಭಿಮನ್ಯು ಮಿಥುನ್ 1-0-19-0, ವಿರಾಟ್ ಕೊಹ್ಲಿ 2-0-14-1, ಅಸಾದ್ ಖಾನ್ ಪಠಾಣ್ 2-0-19-0.



ರಾಯಲ್ ಚಾಲೆಂಜರ್ಸ್ ಬೆಂಗಳೂರು: 18.4 ಓವರ್‌ಗಳಲ್ಲಿ 4 ವಿಕೆಟ್‌ಗೆ 162

ಮಯಾಂಕ್ ಅಗರ್‌ವಾಲ್ ಸಿ ವಿನಯ್ ಬಿ ರವೀಂದ್ರ ಜಡೇಜ  33

ತಿಲಕರತ್ನೆ ದಿಲ್ಶಾನ್ ಸಿ ಮೆಕ್ಲಮ್ ಬಿ ಎಸ್. ಶ್ರೀಶಾಂತ್  01

ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯು ಬಿ ವಿನಯ್ ಕುಮಾರ್  23

ಎಬಿ ಡಿವಿಲಿಯರ್ಸ್ ಔಟಾಗದೆ  54

ಸೌರಭ್ ತಿವಾರಿ ಸಿ ಜಯವರ್ಧನೆ ಬಿ ರೈಫಿ ಗೊಮೆಜ್  26

ಅಸಾದ್ ಖಾನ್ ಪಠಾಣ್ ಔಟಾಗದೆ  12

ಇತರೆ: (ಲೆಗ್ ಬೈ-4, ವೈಡ್-7, ನೋಬಾಲ್-2)  13

ವಿಕೆಟ್ ಪತನ: 1-7 (ದಿಲ್ಶಾನ್), 2-48 (ಕೊಹ್ಲಿ), 3-85 (ಅಗರ್‌ವಾಲ್), 4-137 (ತಿವಾರಿ)

ಬೌಲಿಂಗ್: ಆರ್‌ಪಿ ಸಿಂಗ್ 3-0-29-0, ಎಸ್. ಶ್ರೀಶಾಂತ್ 3-0-28-1, ರವೀಂದ್ರ ಜಡೇಜ 4-0-28-1, ಆರ್. ವಿನಯ್ ಕುಮಾರ್ 3.4-0-26-1, ಮುತ್ತಯ್ಯ ಮುರಳೀಧರನ್ 4-0-27-0, ರೈಫಿ ಗೊಮೆಜ್ 1-0-20-1

ಫಲಿತಾಂಶ: ರಾಯಲ್ ಚಾಲೆಂಜರ್ಸ್‌ಗೆ 6 ವಿಕೆಟ್ ಜಯ ಹಾಗೂ ಎರಡು ಪಾಯಿಂಟ್

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry