ಐಪಿಎಲ್ ಟ್ವೆಂಟಿ-20: ವಾರ್ನ್ ಅಬ್ಬರಕ್ಕೆ ತತ್ತರಿಸಿದ ಕೊಚ್ಚಿ

7

ಐಪಿಎಲ್ ಟ್ವೆಂಟಿ-20: ವಾರ್ನ್ ಅಬ್ಬರಕ್ಕೆ ತತ್ತರಿಸಿದ ಕೊಚ್ಚಿ

Published:
Updated:
ಐಪಿಎಲ್ ಟ್ವೆಂಟಿ-20: ವಾರ್ನ್ ಅಬ್ಬರಕ್ಕೆ ತತ್ತರಿಸಿದ ಕೊಚ್ಚಿ

ಜೈಪುರ (ಪಿಟಿಐ): ಶೇನ್ ವಾರ್ನ್ (16ಕ್ಕೆ3) ಹಾಗೂ ಎಸ್.ಕೆ.  ತ್ರಿವೇದಿ (19ಕ್ಕೆ3) ಅವರ ಆಕ್ರಮಣಕಾರಿ ಬೌಲಿಂಗ್ ನೆರವಿನಿಂದ ರಾಜಸ್ತಾನ ರಾಯಲ್ಸ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ಎದುರು 8 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು.ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಕೊಚ್ಚಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 109 ರನ್  ಮಾತ್ರ ಗಳಿಸಿತು.  ಈ ಸವಾಲಿಗೆ ತಕ್ಕ ಉತ್ತರ ನೀಡಿದ ವಾರ್ನ್ ನೇತೃತ್ವದ ರಾಯಲ್ಸ್ ತಂಡ 14.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿ ಗೆಲುವಿನ ದಡ ಸೇರಿತು.ಮೊದಲು ಬ್ಯಾಟಿಂಗ್ ಮಾಡಿದ ಜಯವರ್ಧನೆ ನೇತೃತ್ವದ ಕೊಚ್ಚಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ     ಹಾಕಿದ ಕೀರ್ತಿ ಶೇನ್ ವಾರ್ನ್ ಹಾಗೂ ತ್ರಿವೇದಿ ಅವರಿಗೆ ಸಲ್ಲಬೇಕು. ವಾರ್ನ್ ಅವರು ಪಾರ್ಥಿವ್ ಪಟೇಲ್, ಜಡೇಜಾ ಹಾಗೂ ಹಾಡ್ಜ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಮೂರು ವಿಕೆಟ್ ಗಳಿಸಿದ ವಾರ್ನ್ ‘ಪಂದ್ಯ ಶ್ರೇಷ್ಠ’ ಗೌರವಕ್ಕೂ ಪಾತ್ರರಾದರು. 32 ರನ್ ಗಳಿಸಿದ ಪಾರ್ಥಿವ್ ಪಟೇಲ್ ಕೊಚ್ಚಿ ಪರ ಗರಿಷ್ಠ ಸ್ಕೋರರ್ ಎನಿಸಿದರು.ರಾಯಲ್ಸ್ ತಂಡದ ಶೇನ್ ವ್ಯಾಟ್ಸನ್ (49, 40ಎಸೆತ, 4ಬೌಂ, 2ಸಿಕ್ಸರ್) ಹಾಗೂ ರಾಹುಲ್ ದ್ರಾವಿಡ್ (43, 37 ಎಸೆತ, 4ಬೌಂ, 1ಸಿಕ್ಸರ್)  ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಕೊಚ್ಚಿ ಬೌಲರ್‌ಗಳನ್ನು ಚಚ್ಚಿದರು. ಯಾವುದೇ ಅಪಾಯಕ್ಕೆ ಅವಕಾಶ ನೀಡದಂತೆ ತಂಡವನ್ನು ಸುಲಭವಾಗಿ ಗುರಿ ಮುಟ್ಟಿಸಿದರು.ಎರಡು ಪಾಯಿಂಟ್ ಕಲೆ ಹಾಕಿದ ರಾಜಸ್ತಾನ್ ರಾಯಲ್ಸ್ ಒಟ್ಟು 7 ಪಾಯಿಂಟ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಜಯಿಸಿದೆ. ರಾಯಲ್ ಚಾಲೆಂಚರ್ಸ್ ವಿರುದ್ಧದ ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು.ಸ್ಕೋರು ವಿವರಕೊಚ್ಚಿ ಟಸ್ಕರ್ಸ್ ಕೇರಳ 20 ಓವರ್‌ಗಳಲ್ಲಿ  109

ಮಾಹೇಲ ಜಯವರ್ಧನೆ ಬಿ ಬೋಥಾ  13

ವಿವಿಎಸ್ ಲಕ್ಷ್ಮಣ್ ರನ್‌ಔಟ್ (ದ್ರಾವಿಡ್)  08

ಪಾರ್ಥಿವ್ ಪಟೇಲ್ ಸ್ಟಂಪ್ಡ್ ಯಾಗ್ನಿಂಕ್ ಬಿ ವಾರ್ನ್  32

ಬ್ರಾಡ್ ಹಾಡ್ಜ್ ಬಿ ವಾರ್ನ್  08

ರವೀಂದ್ರ ಜಡೇಜ  ಸಿ ಮತ್ತು ಬಿ ವಾರ್ನ್  22

ರೈಪಿ ಗೊಮೆಜ್ ಸಿ ವ್ಯಾಟ್ಸನ್ ಬಿ ತ್ರಿವೇದಿ  00

ತಿಸಾರ ಪೆರೇರಾ ಸಿ ಬಿನ್ನಿ ಬಿ ತ್ರಿವೇದಿ   01

ಕೇದಾರ್ ಜಾದವ್ ಸಿ ಯಾಗ್ನಿಂಕ್ ಬಿ ತ್ರಿವೇದಿ  05

ಆರ್. ವಿನಯ್ ಕುಮಾರ್ ಸಿ ವ್ಯಾಟ್ಸನ್ ಬಿ ಅಮಿತ್ ಸಿಂಗ್  05

ಮುತ್ತಯ್ಯ ಮುರಳೀಧರನ್ ಔಟಾಗದೇ  05

ಆರ್.ಪಿ. ಸಿಂಗ್ ರನ್‌ಔಟ್ (ಬೋಥಾ/ಯಾಗ್ನಿಂಕ್)  01

ಇತರೆ: ಬೈ-2, ಲೆಗ್ ಬೈ-4, ವೈಡ್-2, ನೋಬಾಲ್-1  09

ವಿಕೆಟ್ ಪತನ: 1-26(ಲಕ್ಷ್ಮಣ್;3.3), 2-28 (ಜಯವರ್ಧನೆ; 4.1), 3-42 (ಹಾಡ್ಜ್; 7.4), 4-90 (ಜಡೇಜ; 15.3), 5-90(ಪಟೇಲ್; 15.4), 6-90 (ಗೊಮೆಜ್; 16.1), 7-92 (ಪೆರೇರಾ; 16.6), 8-98 (ವಿಜಯ್ ಕುಮಾರ್; 17.5), 9-108 (ಜಾಧವ್; 19.5), 10-109 (ಸಿಂಗ್;19.6).

ಬೌಲಿಂಗ್: ಅಮಿತ್ ಸಿಂಗ್ 4-0-26-1, ಶೇನ್ ವ್ಯಾಟ್ಸನ್ 4-0-23-0, ಜಾನ್ ಬೋಥಾ 4-0-19-1, ಶೇನ್ ವಾರ್ನ್ 4-0-16-3, ಎಸ್.ಕೆ. ತ್ರಿವೇದಿ 4-0-19-3.ರಾಜಸ್ತಾನ ರಾಯಲ್ಸ್  14.1ಒವರ್‌ಗಳಲ್ಲಿ 2 ವಿಕೆಟ್‌ಗೆ 111

ಶೇನ್ ವ್ಯಾಟ್ಸನ್ ಬಿ ಜಡೇಜ   49

ರಾಹುಲ್ ದ್ರಾವಿಡ್ ರನ್ ಔಟ್ (ಜಾದವ್/ಪಟೇಲ್)  44

ಜಾನ್ ಬೋಥಾ ಔಟಾಗದೇ  14

ರಾಸ್ ಟೇಲರ್ ಔಟಾಗದೇ  02

ಇತರೆ: ಲೆಗ್ ಬೈ-1, ವೈಡ್-1  02

ವಿಕೆಟ್ ಪತನ: 1-71 (ದ್ರಾವಿಡ್; 10.4), 2-105 (ವ್ಯಾಟ್ಸನ್; 13.5).

ಬೌಲಿಂಗ್: ಆರ್.ಪಿ. ಸಿಂಗ್ 2-0-11-0, ಆರ್. ವಿನಯ್ ಕುಮಾರ್ 3-0-27-0, ಮುರಳೀಧರನ್ 3.1-0-28-0, ಪೆರೇರಾ 2-0-11-0, ಜಡೇಜ 3-0-24-1, ಗೊಮೆಜ್  1-0-9-0.

ಫಲಿತಾಂಶ: ರಾಜಸ್ತಾನ ರಾಯಲ್ಸ್‌ಗೆ 8 ವಿಕೆಟ್ ಜಯ

‘ಪಂದ್ಯ ಶ್ರೇಷ್ಠ’ ಶೇನ್ ವಾರ್ನ್ (ರಾಜಸ್ತಾನ ರಾಯಲ್ಸ್).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry