ಐಪಿಎಲ್ ನಾಲ್ಕನೇ ಆವೃತ್ತಿಗೆ ವರ್ಣರಂಜಿತ ಚಾಲನೆ

7

ಐಪಿಎಲ್ ನಾಲ್ಕನೇ ಆವೃತ್ತಿಗೆ ವರ್ಣರಂಜಿತ ಚಾಲನೆ

Published:
Updated:
ಐಪಿಎಲ್ ನಾಲ್ಕನೇ ಆವೃತ್ತಿಗೆ ವರ್ಣರಂಜಿತ ಚಾಲನೆ

ಚೆನ್ನೈ (ಪಿಟಿಐ): ಗಗನದತ್ತ ಮುಖ ಮಾಡಿದ ಬಾಣ ಬಿರುಸುಗಳ ಚಿತ್ತಾರ, ಕ್ರಿಕೆಟ್ ಪ್ರೇಮಿಗಳ ಹರ್ಷದ್ಘಾರದ ನಡುವೆ ಇಲ್ಲಿನ ಎಂ.ಎ. ಚಿದಂಬರಂ. ಕ್ರೀಡಾಂಗಣದಲ್ಲಿ ಶುಕ್ರವಾರ ಐಪಿಎಲ್ ನಾಲ್ಕನೇ ಆವೃತ್ತಿಗೆ ಚಾಲನೆ ದೊರೆಯಿತು. ಬಿಸಿಸಿಐ ಅಧ್ಯಕ್ಷ  ಶಶಾಂಕ್ ಮನೋಹರ್ ಅವರು ಅಧಿಕೃತವಾಗಿ ಟೂರ್ನಿ ಚಾಲನೆಗೊಂಡಿತು ಎಂದು ಘೋಷಿಸಿದರು.ಕಿಕ್ಕಿರಿದು ತುಂಬಿದ್ದ ಜನರ ಮಧ್ಯೆ ಬಾಲಿವುಡ್ ಕಿಂಗ್ ಶಾರೂಖ್ ಖಾನ್ ಅವರ ‘ಚಕ್ ದೇ ಇಂಡಿಯಾ’ ನೃತ್ಯ ಹಾಗೂ ತೌರಿಫ್ ಖುರೇಷಿ ಅವರ ಡ್ರಮ್ ಸದ್ಧು, ಸೋನಾ ಮಹಾಪಾತ್ರ, ಸುನಿಧಿ ಚವ್ಹಾಣ್ ಅವರ ತಾಳಕ್ಕೆ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ನಂತರ ರಜನಿಕಾಂತ್ ಹಾಗೂ ಶ್ರೇಯಾ ಶರಣ್ ಅವರು ಸಹ ಹೆಚ್ಚಿನ ಮೆರುಗು ತಂದುಕೊಟ್ಟರು.ಸೇರ್ಪಡೆಯಾದ ಎರಡು ಹೊಸ ತಂಡಗಳು ಸೇರಿದಂತೆ ಒಟ್ಟು ಹತ್ತು ತಂಡಗಳಿಗೆ ಶಶಾಂಕ್ ಮನೋಹರ್ ಸ್ವಾಗತಿಸಿ, ಶುಭ ಕೋರಿದರು. ಮಹೇಂದ್ರ ಸಿಂಗ್ ದೋನಿ ಮೊದಲು ಕ್ರಿಕೆಟ್ ಬ್ಯಾನರ್‌ನ ಮೇಲೆ ಸಹಿ ಮಾಡಿದರು. ನಂತರ ಎಲ್ಲಾ ಹತ್ತು ತಂಡಗಳ ನಾಯಕರು ಆಗಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry