ಐಪಿಎಲ್ ಮತ್ತೊಂದು ವಿವಾದ: ಮಹಿಳೆಯೊಂದಿಗೆ ಅಸಭ್ಯ ನಡೆ, ಆಸ್ಟ್ರೇಲಿಯಾ ಆಟಗಾರನ ಸೆರೆ

7

ಐಪಿಎಲ್ ಮತ್ತೊಂದು ವಿವಾದ: ಮಹಿಳೆಯೊಂದಿಗೆ ಅಸಭ್ಯ ನಡೆ, ಆಸ್ಟ್ರೇಲಿಯಾ ಆಟಗಾರನ ಸೆರೆ

Published:
Updated:

ನವದೆಹಲಿ (ಪಿಟಿಐ): ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದರ ಆಸ್ಟ್ರೇಲಿಯಾದ ಆಟಗಾರ ಲ್ಯೂಕ್ ಪೊಮರ್ಸ್ ಬ್ಯಾಕ್ ಅವರು ಭಾರತೀಯ ಮೂಲದ ಅಮೆರಿಕ ಮಹಿಳೆ ಜೊತೆಗೆ ಅಸಭ್ಯವಾಗಿ ವರ್ತಿಸಿ, ಆಕೆಯ ಭಾವೀ ವರನ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗುವುದರೊಂದಿಗೆ ಐಪಿಎಲ್ ಬುಧವಾರ ಇನ್ನೊಂದು ಭಾರಿ ವಿವಾದದಲ್ಲಿ ಸಿಲುಕಿತು.ಲ್ಯೂಕ್ ದಾಳಿಯಿಂದಾಗಿ ಮಹಿಳೆಯ ಭಾವೀ ವರ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.27ರ ಹರೆಯದ ಲ್ಯೂಕ್ ಇಲ್ಲಿನ ಮೌರ್ಯ ಶೆರಟನ್ ಹೋಟೆಲ್ ನಲ್ಲಿ ಕಳೆದ ರಾತ್ರಿ ಭಾರತೀಯ ಮೂಲದ ಅಮೆರಿಕನ್ ಮಹಿಳೆ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದು, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಲ್ಯೂಕ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆಟಗಾರ ತನ್ನನ್ನು ಮುಂಬೈಯಿಂದ ಬಂದಿದ್ದ ತನ್ನ ಮಿತ್ರರು ಹಾಗೂ ನನ್ನನ್ನು ನನ್ನ ಭಾವೀ ವರನ ಜೊತೆಗೆ ಪಾನೀಯ ಕೂಟಕ್ಕೆ ಬರುವಂತೆ ಆಹ್ವಾನಿಸಿದ್ದರು ಎಂದು ಮಹಿಳೆ ಹೇಳಿದ್ದಾರೆ.ಈ ಸಂದರ್ಭದಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುವ ಸಲುವಾಗಿ ತನ್ನ ಕೊಠಡಿಗೆ ತೆರಳಿದಾಗ ಹಿಂದೆಯೇ ಬಂದ ಬಂದ ಲ್ಯೂಕ್ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಮಹಿಳೆ ದೂರಿದ್ದಾರೆ. ಆಕೆಯ ಭಾವೀ ವರ ಮಧ್ಯ ಪ್ರವೇಶಿಸಿದಾಗ ಲ್ಯೂಕ್ ಆತನನ್ನು ಥಳಿಸಿದರು ಎಂದು ಮಹಿಳೆ ಹೇಳಿದರು.ಪ್ರಕರಣ ಹಿಂತೆಗೆದುಕೊಳ್ಳುವಂತೆ ತನ್ನ ಮೇಲೆ ಒತ್ತಡ ಹಾಕಲಾಗುತ್ತಿದೆ. ಆದರೆ ಹಾಗೆ ಮಾಡಲಾರೆ ಎಂದೂ ಮಹಿಳೆ ಹೇಳಿದ್ದಾರೆ.

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry