ಶುಕ್ರವಾರ, ಜೂನ್ 18, 2021
23 °C

ಐಪಿಎಸ್ ಅಧಿಕಾರಿ ಹತ್ಯೆ ಪ್ರಕರಣ: ಇಂದಿನಿಂದ ಅಣ್ಣಾ ತಂಡದ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಅನ್ಯಾಯದ ವಿರುದ್ಧ ದನಿಯೆತ್ತುವವರ ರಕ್ಷಣೆಗೆ ಸಶಕ್ತ ಕಾನೂನು ರಚನೆಯಾಗಬೇಕು ಎಂದು ಆಗ್ರಹಿಸಿ ಮಂಗಳವಾರದಿಂದ ಮೂರುದಿನಗಳ ಕಾಲ ಅಣ್ಣಾ ತಂಡ ಭೋಪಾಲ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದೆ.

ಇತ್ತೀಚೆಗೆ ಗಣಿ ಮಾಫಿಯಾದವರಿಂದ ಹತ್ಯೆಗೊಳಗಾದ ಐಪಿಎಸ್ ಅಧಿಕಾರಿ ನರೇಂದ್ರಕುಮಾರ್ ಅವರಿಗೂ ನ್ಯಾಯ ಒದಗಿಸುವಂತೆ ಒತ್ತಾಯಿಸಲಿರುವ ತಂಡ, ರಾಜ್ಯದಲ್ಲಿ ಜನ ಲೋಕಾಯುಕ್ತ ಮಸೂದೆ ಜಾರಿಗೊಳಿಸಬೇಕು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರಿಗೆ ಮನವಿ ಮಾಡಲಿದೆ.

ಅಧಿಕಾರಿ ಅಮಾನತು

ಮೊರೆನಾ/ಭೋಪಾಲ್: ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್ ಹತ್ಯೆ ಬಾನ್‌ಮೋರ್ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸ್ ಠಾಣೆಯ ಮೇಲ್ವಿಚಾರಕ ವಿ.ಬಿ.ಎಸ್. ರಘುವಂಶಿ ಅವರನ್ನು ಮಧ್ಯಪ್ರದೇಶ ಸರ್ಕಾರ ಭಾನುವಾರ ಅಮಾನತುಗೊಳಿಸಿದೆ.

ರಘುವಂಶಿ ಕಾರ್ಯನಿರ್ವಹಣೆ ಸಮಾಧಾನಕರವಾಗಿರಲಿಲ್ಲ. ಜಿಲ್ಲಾಧಿಕಾರಿ ಡಿ.ಡಿ.ಅಗರ್‌ವಾಲ್ ಹಾಗೂ ವಿಭಾಗೀಯ ಅರಣ್ಯಾಧಿಕಾರಿ ಆರ್.ಎಸ್.ಸಿಕರ್‌ವಾರ್ ಜೊತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಮಾತುಕತೆ ನಡೆಸಿದ ಬಳಿಕ ರಘುವಂಶಿ ಅವರನ್ನು ಅಮಾನತುಗೊಳಿಸಿ ಆ ಸ್ಥಾನಕ್ಕೆ ರಾಕೇಶ್ ತಿವಾರಿ ಅವರನ್ನು ನೇಮಿಸಲಾಗಿದೆ ಎಂದು ಮೊರೆನಾ ಎಸ್‌ಪಿ ಸಂಜಯ್‌ಕುಮಾರ್ ಸೋಮವಾರ ತಿಳಿಸಿದ್ದಾರೆ.

ಸ್ಥಳೀಯ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಯಂತ್ರಿಸುವಲ್ಲಿ ರಘುವಂಶಿ ತಮ್ಮ ಮಗನಿಗೆ ಸಹಕರಿಸುತ್ತಿರಲಿಲ್ಲ ಎಂದು ನರೇಂದ್ರಕುಮಾರ್ ತಂದೆ ಕೇಶವ್‌ದೇವ್ ಸಿಂಗ್ ಆಪಾದಿಸಿದ್ದಾರೆ. ಅಲ್ಲದೆ ರಘುವಂಶಿಗೆ ಇನ್ನಷ್ಟು ಕಠಿಣ ಶಿಕ್ಷೆ ನೀಡಬೇಕಿತ್ತು ಎಂದು ಕೇಶವ್‌ದೇವ್ ಅಭಿಪ್ರಾಯ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಎಂಪಿ ಬಂದ್

ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್ ಸಿಂಗ್ ಹತ್ಯೆ ಖಂಡಿಸಿ, ಕಾಂಗ್ರೆಸ್ ಮಧ್ಯಪ್ರದೇಶ ಬಂದ್‌ಗೆ ಕರೆ ನೀಡಿದೆ.

ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಾಂತಿಲಾಲ್ ಭುರಿಯಾ ಹಾಗೂ ವಿರೋಧ ಪಕ್ಷದ ನಾಯಕ ಅಜಯ್‌ಸಿಂಗ್ ಈ ಬಂದ್‌ಗೆ ಕರೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.