ಐಪಿಒ ಮಾಹಿತಿ ಬಹಿರಂಗಕ್ಕೆ ಚಾಲನೆ

7

ಐಪಿಒ ಮಾಹಿತಿ ಬಹಿರಂಗಕ್ಕೆ ಚಾಲನೆ

Published:
Updated:

ನವದೆಹಲಿ (ಪಿಟಿಐ): ಈ ಹಿಂದೆ ಪ್ರಕಟಿಸಿರುವ ಮತ್ತು ನಿರ್ವಹಿಸಿರುವ  ಆರಂಭಿಕ ಸಾರ್ವಜನಿಕ ಕೊಡುಗೆಗಳ (ಐಪಿಒ) ಸಾಧನೆ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಮರ್ಚೆಂಟ್ಸ್ ಬ್ಯಾಂಕರ್ಸ್‌ಗಳು ಮುಂದಾಗಿವೆ.   ಹೂಡಿಕೆದಾರರ ಹಿತಾಸಕ್ತಿಯಿಂದ `ಐಪಿಒ~ ಸಾಧನೆ ದಾಖಲೆಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮರ್ಚೆಂಟ್ಸ್ ಬ್ಯಾಂಕರ್ಸ್‌ಗಳಿಗೆ ಸೂಚಿಸಿತ್ತು.    `ಸೆಬಿ~ ನಿಯಮದನ್ವಯ ಎಡಿಲ್‌ವೈಸ್, ಸಿಟಿ ಮತ್ತು ಮೋರ್ಗನ್ ಸ್ಟ್ಯಾನ್ಲಿ  ಹಣಕಾಸು ಸಂಸ್ಥೆಗಳು ಈ ಹಿಂದಿನ `ಐಪಿಒ~ ಸಾಧನೆ ಮಾಹಿತಿ ಬಹಿರಂಗಗೊಳಿಸಿವೆ. ಮೋರ್ಗನ್ ಸ್ಟ್ಯಾನ್ಲಿ ಐದು `ಐಪಿಒ~ಗಳನ್ನು ಬಿಡುಗಡೆ ಮಾಡಿದ್ದು, ಈ ಕುರಿತು ಮಾಹಿತಿ ಬಹಿರಂಗಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry