ಬುಧವಾರ, ನವೆಂಬರ್ 13, 2019
23 °C

`ಐಪಿಒ': ರೂ. 6000ಕೋಟಿ ಸಂಗ್ರಹ

Published:
Updated:

ನವದೆಹಲಿ (ಪಿಟಿಐ): ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ 10 ದೇಶೀಯ ಕಂಪೆನಿಗಳು 2012-13ನೇ ಸಾಲಿನಲ್ಲಿ ಒಟ್ಟುರೂ6 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿವೆ.2011-12ರಲ್ಲಿ 33 ಕಂಪೆನಿಗಳು `ಐಪಿಒ' ಮೂಲಕರೂ5,808 ಕೋಟಿ ಬಂಡವಾಳ ಸಂಗ್ರಹಿಸಿದ್ದವು. ಅದಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಬಂಡವಾಳ ಮೌಲ್ಯ ಶೇ 4ರಷ್ಟು ಏರಿಕೆ ಕಂಡಿದೆ  ಎಂದು `ಮುಂಬೈ ಷೇರು ವಿನಿಮಯ ಕೇಂದ್ರ'(ಬಿಎಸ್‌ಇ) ಸೋಮವಾರ ತಿಳಿಸಿದೆ.2010-11ರಲ್ಲಿ 52 ಕಂಪೆನಿಗಳು `ಐಪಿಒ' ಮೂಲಕ ರೂ. 33,183 ಕೋಟಿ ಬಂಡವಾಳ ಸಂಗ್ರಹಿಸಿದ್ದವು. ಈ ಬಾರಿ ಮಾರುಕಟ್ಟೆಗೆ ಬಿಡುಗಡೆಯಾದ ಹೆಚ್ಚಿನ `ಐಪಿಒ'ಗಳೆಲ್ಲ ಚಿಕ್ಕ ಪ್ರಮಾಣದ್ದಾಗಿದ್ದವು. ಮೌಲ್ಯದಲ್ಲಿ ರೂ.1 ಸಾವಿರ ಕೋಟಿಗಿಂತ ಕಡಿಮೆ ಇದ್ದವು. ಇದರಲ್ಲಿ ಭಾರ್ತಿ ಇನ್ಫ್ರಾಟೆಲ್‌ನ ರೂ. 4,118 ಕೋಟಿ ಮೊತ್ತದ್ದೇ ವರ್ಷದ ಅತಿ ದೊಡ್ಡ `ಐಪಿಒ' ಚಟುವಟಿಕೆಯಾಗಿದೆ. 2010ರ ಅಕ್ಟೋಬರ್‌ನಲ್ಲಿ ಸರ್ಕಾರಿ ಸ್ವಾಮ್ಯದ ಕೋಲ್  ಇಂಡಿಯಾ `ಐಪಿಒ' ಮೂಲಕ ರೂ. 15,475 ಕೋಟಿ ಸಂಗ್ರಹಿಸಿದ್ದು, ಇದುವರೆಗಿನ ದಾಖಲೆ.

ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಷೇರುಪೇಟೆ ಅಸ್ಥಿರತೆಯಿಂದ ಹಲವು ಕಂಪೆನಿಗಳು `ಐಪಿಒ' ಪ್ರಕಟಣೆ ಹಿಂದಕ್ಕೆ ಪಡೆದಿವೆ. ಇನ್ನು ಕೆಲವು ಕಂಪೆನಿಗಳು `ಐಪಿಒ' ಪ್ರಕ್ರಿಯೆ ಮುಂದೂಡಿವೆ. ಚಿನ್ನಾಭರಣ ವಹಿವಾಟು ಕ್ಷೇತ್ರದ ಮೂರು ಕಂಪೆನಿಗಳು ಈ ಬಾರಿ `ಐಪಿಒ' ಬಿಡುಗಡೆ ಮಾಡಿದ್ದು ಮತ್ತೊಂದು ವಿಶೇಷ.

ಪ್ರತಿಕ್ರಿಯಿಸಿ (+)