ಸೋಮವಾರ, ಡಿಸೆಂಬರ್ 16, 2019
18 °C

`ಐಬಿಎಚ್‌ಎಫ್‌ಎಲ್' ನಿವ್ವಳ ಲಾಭ ರೂ.1266 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಇಂಡಿಯ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿ.'(ಐಬಿಎಚ್‌ಎಫ್‌ಎಲ್) 2012-13ನೇ ಹಣಕಾಸು ವರ್ಷದಲ್ಲಿ ರೂ.1265.99 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಲಾಭ ರೂ.1006.37 ಕೋಟಿಗೆ ಹೋಲಿಸಿದಲ್ಲಿ ಶೇ 25.59ರಷ್ಟು ಪ್ರಗತಿ ದಾಖಲಿಸಿದೆ.ವಾರ್ಷಿಕ ವರಮಾನ ರೂ.3,827.68 ಕೋಟಿಯಿಂದ ರೂ.4,777.87 ಕೋಟಿಗೆ (ಶೇ 24.82) ಹೆಚ್ಚಿದೆ. ರೂ.40.19 ಪ್ರತಿ ಷೇರಿನ ಗಳಿಕೆಯಾಗಿದ್ದು, 2012-13ನೇ ಸಾಲಿಗೆ ಒಟ್ಟು ರೂ.20ರ ಲಾಭಾಂಶ ನೀಡಲಾಗುತ್ತಿದೆ ಎಂದು ಮುಂಬೈ ಮೂಲದ ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)