ಐಬಿಎಲ್: ಎರಡನೇ ಆವೃತ್ತಿಗೆ ಮಹಿಳಾ ಡಬಲ್ಸ್

7

ಐಬಿಎಲ್: ಎರಡನೇ ಆವೃತ್ತಿಗೆ ಮಹಿಳಾ ಡಬಲ್ಸ್

Published:
Updated:
ಐಬಿಎಲ್: ಎರಡನೇ ಆವೃತ್ತಿಗೆ ಮಹಿಳಾ ಡಬಲ್ಸ್

ನವದೆಹಲಿ (ಪಿಟಿಐ): ಚೊಚ್ಚಲ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್‌ನಿಂದ (ಐಬಿಎಲ್) ಖುಷಿಯಾಗಿರುವ ಭಾರತ ಬ್ಯಾಡ್ಮಿಂಟನ್ ಸಂಸ್ಥೆಯು (ಬಿಎಐ) ಮುಂದಿನ ಆವೃತ್ತಿಯಲ್ಲಿ ಮಹಿಳಾ ಡಬಲ್ಸ್‌ಗೂ ಅವಕಾಶ ನೀಡಲು ಸಮಾಲೋಚನೆ ನಡೆಸುತ್ತಿದೆ.ಅಷ್ಟು ಮಾತ್ರವಲ್ಲದೇ, ಅಂಪೈರ್ ತೀರ್ಪು ಪರಾಮರ್ಶೆ, ಪಂದ್ಯದ ಸಮಯದಲ್ಲಿ ಬದಲಾವಣೆ ಸೇರಿದಂತೆ ಹಲವು ಬದಲಾವಣೆ ತರಲು ಚಿಂತಿಸಲಾಗುವುದು ಎಂದು ಬಿಎಐ ಅಧ್ಯಕ್ಷ ಡಾ.ಅಖಿಲೇಶ್ ದಾಸ್ ಗುಪ್ತಾ ತಿಳಿಸಿದ್ದಾರೆ.`ಐಬಿಎಲ್ ಯಶಸ್ವಿನಲ್ಲಿ ಪುರುಷರ ಹಾಗೂ ಮಹಿಳೆಯರ ಸಮಪಾಲಿದೆ. ಈ ಗಮನವನ್ನು ಅಂಶದಲ್ಲಿಟ್ಟುಕೊಂಡು ಮಹಿಳೆಯರ ಡಬಲ್ಸ್‌ಗೆ ಅವಕಾಶ ಮಾಡಿಕೊಡಲಾಗುವುದು. ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಈ ವ್ಯವಸ್ಥೆ ಇದೆ' ಎಂದು ಅವರು ಹೇಳಿದ್ದಾರೆ.

`ಪಂದ್ಯಗಳನ್ನು ಬೇಗನೇ ಆರಂಭಿಸಲು ಚಿಂತಿಸಲಾಗುವುದು. ಈ ಬಗ್ಗೆ ಪ್ರಸಾರಕರೊಂದಿಗೆ ಚರ್ಚಿಸಲಾಗುವುದು. ಕುಟುಂಬ ಸಮೇತ ಬಂದು ಈ ಲೀಗ್ ವೀಕ್ಷಿಸಬೇಕು ಎಂಬುದು ನಮ್ಮ ಉದ್ದೇಶ' ಎಂದು ಅಖಿಲೇಶ್ ನುಡಿದಿದ್ದಾರೆ.ಈ ಬಾರಿಯ ಐಬಿಎಲ್‌ನಲ್ಲಿ ಹೈದರಾಬಾದ್ ಹಾಟ್‌ಷಾಟ್ಸ್ ತಂಡದವರು ಚಾಂಪಿಯನ್ ಆಗಿದ್ದರು. ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವಧ್ ವಾರಿಯರ್ಸ್ ಎದುರು ಗೆಲುವು ಸಾಧಿಸಿದ್ದರು.  ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಾರಿಯರ್ಸ್‌ನ ಪಿ.ವಿ.ಸಿಂಧು ವಿರುದ್ಧ ಹಾಟ್‌ಷಾಟ್ಸ್‌ನ  ಸೈನಾ ಮತ್ತೊಮ್ಮೆ ಗೆಲುವು ಸಾಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry