ಐರಣಿ: ಸರ್ವಜ್ಞ ಚಿತ್ರದ ಚಿತ್ರೀಕರಣ ಆರಂಭ

7

ಐರಣಿ: ಸರ್ವಜ್ಞ ಚಿತ್ರದ ಚಿತ್ರೀಕರಣ ಆರಂಭ

Published:
Updated:

ರಾಣೆಬೆನ್ನೂರು: `ಒತ್ತಡದಲ್ಲಿ ಕಾಲ ಕಳೆಯುತ್ತಿರುವ ಇಂದಿನ ದಿನದಲ್ಲಿ ಜನರಿಗೆ ಧರ್ಮ, ಸಂಸ್ಕಾರದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸರ್ವಜ್ಞನ ಜೀವನ ಚರಿತ್ರೆ ಬಿಂಬಿಸುವ ಉದ್ದೇಶದಿಂದ `ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ~ ಚಲನಚಿತ್ರದ ಚಿತ್ರೀಕರಣವನ್ನು ತಾಲ್ಲೂಕಿನ ಸುಕ್ಷೇತ್ರ ಐರಣಿ ಹೊಳೆಮಠದಲ್ಲಿ ಆರಂಭಿಸಲಾ ಗಿದೆ ಎಂದು ಚಿತ್ರದ ನಿರ್ದೇಶಕ ಎಸ್. ಶಿವಕುಮಾರ ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಅಬಲೂರ ಸೇರಿದಂತೆ ರಾಜ್ಯದಾದ್ಯಂತ ಚಿತ್ರದ ಚಿತ್ರ್ರೀಕರಣ ನಡೆಯಲಿದ್ದು, ಸಂಕ್ರಾತಿ ವೇಳೆಗೆ ಚಿತ್ರ ಬಿಡುಗಡೆ ಮಾಡಲಾಗುತ್ತದೆ ಎಂದರು.ನಿರ್ಮಾಪಕಿ ನಾಗರತ್ನ ಶಿವ ಕುಮಾರ, ಸಂತೋಷ, ಶ್ರೀನಿವಾಸ ಮೂರ್ತಿ, ಕಷ್ನಮೂರ್ತಿ ಗುಂಗೇರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry