ಐರೋಪ್ಯ ಒಕ್ಕೂಟದಿಂದ ಹೊರಬರಲು ಒಲವು

7
ಸಮೀಕ್ಷೆಯಲ್ಲಿ ಬ್ರಿಟನ್ನರ ಅಭಿಪ್ರಾಯ

ಐರೋಪ್ಯ ಒಕ್ಕೂಟದಿಂದ ಹೊರಬರಲು ಒಲವು

Published:
Updated:

ಲಂಡನ್ (ಪಿಟಿಐ): ಯುರೋಪಿನ ಪ್ರಬಲ ಶಕ್ತಿಯಾಗಿರುವ ಬ್ರಿಟನ್ನಿನಲ್ಲಿ ಐರೋಪ್ಯ ಒಕ್ಕೂಟದ (ಇಯು) ಬಗ್ಗೆ ಸಂಶಯ ಮಡುಗಟ್ಟಿದೆ. ಬ್ರಿಟನ್ನಿನ ಶೇ 51ಕ್ಕೂ ಹೆಚ್ಚು ಜನರು `ಇಯು'ನಿಂದ ಹೊರಬರಲು ಬಯಸಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.ಇದೇ ವೇಳೆಗೆ `ಇಯು'ನಲ್ಲಿ ಉಳಿಯಲು ಬಯಸಿದವರ ಸಂಖ್ಯೆ ಶೇ 40ರಷ್ಟು ಇದೆ. ಐರೋಪ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು, ಜಾಗತಿಕ ಮಟ್ಟದಲ್ಲಿ `ಯುರೊ' ಕರೆನ್ಸಿ ಮೌಲ್ಯ ಕುಸಿಯುವ ಭೀತಿ ಬ್ರಿಟನ್ ಜನರನ್ನು ಬಹಳವಾಗಿ ಕಾಡುತ್ತಿದೆ ಎಂದು ಅಧ್ಯಯನ ಹೇಳಿದೆ.ಕಳೆದ ವರ್ಷ ನಡೆದ ಸಮೀಕ್ಷೆಯಲ್ಲಿ ಶೇ 49ರಷ್ಟು ಬ್ರಿಟನ್ ಜನರು `ಇಯು' ವಿರೋಧಿಸಿದ್ದರು. ಶೇ 40ರಷ್ಟು ಜನರು ಪರವಾಗಿದ್ದರು. ಈಗ `ಇಯು' ಕುರಿತು ಸಂಶಯ ಮತ್ತಷ್ಟು ಹೆಚ್ಚಳವಾಗಿದ್ದು, ವಿರೋಧಿಸುವವರ ಸಂಖ್ಯೆ ಶೇ 2ರಷ್ಟು ಏರಿಕೆ ಆಗಿದೆ.ಒಂದು ದಶಕದ ಹಿಂದೆ ನಡೆಸಲಾದ ಇಂತಹದ್ದೇ ಸಮೀಕ್ಷೆಯೊಂದರಲ್ಲಿ `ಇಯು' ಪರವಾಗಿ ಬ್ರಿಟನ್ ವಾಸಿಗಳು ಒಲವು ತೋರಿದ್ದರು. ಆಗ ಶೇ 68 ಜನರು ಪರವಾಗಿಯೂ, ಶೇ 19ರಷ್ಟು ಮಂದಿ ವಿರುದ್ಧವಾಗಿ ನಿಲುವು ವ್ಯಕ್ತಪಡಿಸಿದ್ದರು ಎಂದು `ಡೈಲಿ ಮೇಲ್' ವರದಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry