ಐವತ್ತು ಓವರುಗಳ ಅಜೇಯ ಆಟ

7

ಐವತ್ತು ಓವರುಗಳ ಅಜೇಯ ಆಟ

Published:
Updated:

ಬೆಂಗಳೂರು: ಐವತ್ತು ಓವರುಗಳವರೆಗೆ ಆಡಿ ಅಜೇಯವಾಗಿ ಇನಿಂಗ್ಸ್ ಪೂರ್ಣಗೊಳಿಸುವುದು ಭಾರತದ ಆಕ್ರಮಣಕಾರಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮಹತ್ವಾಕಾಂಕ್ಷೆ.

ಇಂಥದೊಂದು ವಿಶಿಷ್ಟವಾದ ಸಾಧನೆಯನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಮಾಡಿ ತೋರಿಸಬೇಕು ಎನ್ನುವ ಛಲದೊಂದಿಗೆ ‘ವೀರೂ’ ಸಜ್ಜಾಗಿದ್ದಾರೆ.

‘ಏಕದಿನ ಕ್ರಿಕೆಟ್‌ನಲ್ಲಿ 50 ಓವರು ಬ್ಯಾಟಿಂಗ್ ಮಾಡಿಲ್ಲ. ಅತಿ ಹೆಚ್ಚು ಎಂದರೆ 43ರಿಂದ 44 ಓವರುಗಳವರೆಗೆ ಆಡಿದ್ದೇನೆ ಎಂದುಕೊಳ್ಳುತ್ತೇನೆ. ಈ ವಿಶ್ವಕಪ್‌ನಲ್ಲಿ ಇನಿಂಗ್ಸ್ ಕೊನೆಯವರೆಗೆ ಆಡುವ ಗುರಿಯನ್ನು ಇಟ್ಟುಕೊಂಡಿದ್ದೇನೆ. ಹಾಗೆ ಮಾಡಿದರೆ ತಂಡಕ್ಕೆ ಭಾರಿ ಬಲ ನೀಡಿದಂತಾಗುತ್ತದೆ’ ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ನಮ್ಮ ತಂಡದಲ್ಲಿ ವಿಶಿಷ್ಟವಾದ ಅಂಶವೊಂದಿದೆ. ಇಲ್ಲಿ ಅನಗತ್ಯವಾಗಿ ಒತ್ತಡ ಹೇರುವಂತ ಸಲಹೆ ನೀಡುವವರು ಇಲ್ಲ. ಕೋಚ್ ಹಾಗೂ ನಾಯಕ ನನ್ನ ನೈಜವಾದ ಬ್ಯಾಟಿಂಗ್‌ಗೆ ಪ್ರೋತ್ಸಾಹ ನೀಡುತ್ತಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry