ಐವತ್ತೊಂದರ ಹುರುಪು

ಗುರುವಾರ , ಜೂಲೈ 18, 2019
26 °C
ಪಿಕ್ಚರ್ ಪ್ಯಾಲೆಸ್

ಐವತ್ತೊಂದರ ಹುರುಪು

Published:
Updated:

ಸಿನಿಮಾದ ಯಶಸ್ಸು, ವೈಫಲ್ಯದ ಗ್ರಾಫ್‌ನಿಂದ ವ್ಯತಿರಿಕ್ತ ಪರಿಣಾಮವನ್ನು ಅಷ್ಟಾಗಿ ಎದುರಿಸದ ಕನ್ನಡದ ನಟರ ಪಟ್ಟಿ ಮಾಡತೊಡಗಿದರೆ ಶಿವರಾಜ್‌ಕುಮಾರ್ ಹೆಸರು ಎದ್ದುಕಾಣುತ್ತದೆ. ಹೊಸ ಚಿತ್ರಕ್ಕೆ `ಸಿಕ್ಸ್‌ಪ್ಯಾಕ್' ಮಾಡಿಕೊಳ್ಳುತ್ತಿರುವ ಅವರು ಇನ್ನೂ ಸಪೂರವಾಗಿದ್ದಾರೆ.ಮುಖದ ಮೇಲೆ ಗಡ್ಡ ಮೂಡಿದೆ. ಸಿನಿಮಾ ಬಯಸುವ ಪಾತ್ರಕ್ಕೆ ತಕ್ಕಂತೆ ತಮ್ಮ ದೇಹಾಕಾರದಲ್ಲಿ ಮಾರ್ಪಾಟು ಮಾಡಿಕೊಳ್ಳಲು ಹಿಂದೇಟು ಹಾಕದ ಅವರಿಗೆ ಶುಕ್ರವಾರ (ಜುಲೈ 12) ಐವತ್ತೊಂದು ತುಂಬಿತು. ಮುಖದಲ್ಲಿ ಬತ್ತದ ಉತ್ಸಾಹ ತುಂಬಿಕೊಂಡಿದ್ದ ಅವರ ಹುಟ್ಟುಹಬ್ಬಕ್ಕೆ ಯಾವುದೋ ದೂರದ ಹಳ್ಳಿಯ ಮಕ್ಕಳಿಂದ ಹಿಡಿದು ತಮ್ಮಂದಿರೂ ಸಾಕ್ಷಿಯಾದರು. ಅಭಿಮಾನಿಗಳು ತಂದ ಕೇಕ್‌ನ ಸಿಹಿ ಸವಿದ ಕ್ಷಣಗಳ ಚಿತ್ರಪಟ ಇದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry