ಐವರು ಎನ್‌ಸಿಸಿ ಶಿಬಿರಾರ್ಥಿಗಳ ಸಾವು

7

ಐವರು ಎನ್‌ಸಿಸಿ ಶಿಬಿರಾರ್ಥಿಗಳ ಸಾವು

Published:
Updated:

ಕೊಚ್ಚಿ (ಪಿಟಿಐ): ರಾಷ್ಟ್ರೀಯ ಚಾರಣ ಶಿಬಿರದಲ್ಲಿ ಭಾಗವಹಿಸಿದ್ದ ದೆಹಲಿ ಮೂಲದ ಐವರು ಎನ್‌ಸಿಸಿ ವಿದ್ಯಾರ್ಥಿಗಳು ಪೆರಿಯಾರ್ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬುಧವಾರ ಇಲ್ಲಿ ನಡೆದಿದೆ.ಎನ್‌ಸಿಸಿ ಶಿಬಿರಾರ್ಥಿಗಳು ಬುಧವಾರ ಸ್ನಾನಕ್ಕೆಂದು ಪೆರಿಯಾರ್ ನದಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳದ ಎನ್‌ಸಿಸಿ ನಿರ್ದೇಶನಾಲಯದ ಎರ್ನಾಕುಲಂ ಘಟಕವು ಮಲಯತ್ತೂರು ಬೆಟ್ಟದಲ್ಲಿ ಇದೇ ತಿಂಗಳ 23ರಿಂದ ಏರ್ಪಡಿಸಿರುವ ಚಾರಣ ಶಿಬಿರದಲ್ಲಿ ದೇಶದ ವಿವಿಧೆಡೆಯಿಂದ ಒಂದು ಸಾವಿರ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry