ಮಂಗಳವಾರ, ಮೇ 18, 2021
22 °C

ಐವರು ನಕ್ಸಲರ ಬಿಡುಗಡೆಗೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ/ಐಎಎನ್‌ಎಸ್): ಅಪಹರಣಕಾರರು ತಮ್ಮ ಒತ್ತೆಯಲ್ಲಿರುವ ಇಟಲಿ ಪ್ರಜೆ ಬಿಡುಗಡೆಗೆ ಪ್ರತಿಯಾಗಿ ಬಂಧಿತ ಆರು ನಕ್ಸಲರನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದು, ಒಡಿಶಾ ಸರ್ಕಾರ ಶನಿವಾರ ಐವರ ಬಿಡುಗಡೆಗೆ ಒಪ್ಪಿಕೊಂಡಿದೆ.ಈ ವಿಷಯವನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಬೇಡಿಕೆಗಳನ್ನು 96 ತಾಸುಗಳಲ್ಲಿ ಈಡೇರಿಸದಿದ್ದರೆ ತಮ್ಮ ವಶದಲ್ಲಿರುವ ಇಟಲಿ ಪ್ರಜೆ ಪೌಲೊ ಬೊಸುಕೊ ಸ್ಥಿತಿ ಅಪಾಯಕ್ಕೆ ಸಿಲುಕಲಿದೆ ಎಂದು ಮಾವೊವಾದಿ ಮುಖಂಡ ಸವ್ಯಸಾಚಿ ಪಂಡಾ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಸರ್ಕಾರ ಒತ್ತಡಕ್ಕೆ ಸಿಲುಕಿದೆ. ಮಾವೊವಾದಿಗಳ ಪರ ಸಂಧಾನ ನಡೆಸುತ್ತಿರುವ ಬಿ. ಡಿ. ಶರ್ಮ ಮತ್ತು ದಂಡಪಾಣಿ ಮೊಹಂತಿ ಅವರ ಅಭಿಪ್ರಾಯವನ್ನು ಸರ್ಕಾರ ಸೂಕ್ತವಾಗಿ ಗ್ರಹಿಸಿಲ್ಲ ಎಂಬ ವರದಿಯನ್ನು ಪಟ್ನಾಯಕ್, ತಳ್ಳಿಹಾಕಿದ್ದಾರೆ. 

 

 ಐವರು ನಕ್ಸಲರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿರುವುದರಿಂದ ಇಟಲಿ ಪ್ರಜೆಗೆ ತೊಂದರೆ ನೀಡದೆ ಬಿಡುಗಡೆ ಮಾಡಬೇಕು ಎಂದು ಪಟ್ನಾಯಕ್, ಸವ್ಯಸಾಚಿ ಪಂಡಾಗೆ ಮನವಿ ಮಾಡಿದರು.ಇದಕ್ಕೂ ಮೊದಲು ಸರ್ಕಾರದ ಪ್ರತಿನಿಧಿಗಳು ಹಾಗೂ ಮಾವೊವಾದಿ ಪರ ಸಂಧಾನಕಾರರ ಮಧ್ಯೆ ಮತ್ತೆ ಮಾತುಕತೆ ನಡೆದು, ಏ.10ರ ಒಳಗಾಗಿ ಇಟಲಿ ಪ್ರಜೆ ಬಿಡುಗಡೆ ಕುರಿತು ಚರ್ಚಿಸಲಾಯಿತು.ಬಂಧನದಲ್ಲಿರುವವರ  ಬಿಡುಗಡೆ ಬಗ್ಗೆ ಲಿಖಿತ ಭರವಸೆ ನೀಡಬೇಕೆಂಬ ನಕ್ಸಲರ ಬೇಡಿಕೆ ಕುರಿತೂ ಚರ್ಚಿಸಲಾಯಿತು ಎನ್ನಲಾಗಿದೆ.ಷರತ್ತು: ಅಪಹೃತ ಶಾಸಕ ಜಿನಾ ಹಿಕಾಕಾ ಬಿಡುಗಡೆಗೆ ಗಡುವನ್ನು ಮಂಗಳವಾರದವರೆಗೆ ವಿಸ್ತರಿಸಿರುವ ಮಾವೊವಾದಿಗಳ ಮತ್ತೊಂದು ಗುಂಪು, ಐವರು ನಕ್ಸಲರನ್ನು ಬಿಡುಗಡೆ ಮಾಡಬೇಕು ಎಂಬ ಷರತ್ತು ಹಾಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.