ಐಶ್ವರ್ಯ ರೈಗೆ ಹೆಣ್ಣು ಮಗು ಜನನ

7

ಐಶ್ವರ್ಯ ರೈಗೆ ಹೆಣ್ಣು ಮಗು ಜನನ

Published:
Updated:
ಐಶ್ವರ್ಯ ರೈಗೆ ಹೆಣ್ಣು ಮಗು ಜನನ

ಮುಂಬೈ (ಐಎಎನ್ಎಸ್) : ಬಾಲಿವುಡ್‌ನ ಖ್ಯಾತ ನಟಿ ಐಶ್ವರ್ಯ ರೈ ಅವರು ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ಐಶ್ವರ್ಯ ಅವರನ್ನು ಹೆರಿಗೆಗಾಗಿ ಮಂಗಳವಾರ ಇಲ್ಲಿನ ಅಂಧೇರಿಯ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಬುಧವಾರ  ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೆರಿಗೆಯಾಗಿದ್ದು  ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಆಸ್ಪತ್ರೆಯಲ್ಲಿ ಐಶ್ವರ್ಯ ಪತಿ ಅಭಿಷೇಕ್ ಬಚ್ಚನ್, ಮಾವ ಅಮಿತಾಭ್ ಬಚ್ಚನ್, ಪೋಷಕರಾದ ವೃಂದ ಮತ್ತು ಕೃಷ್ಣರಾಜ್ ಸೇರಿದಂತೆ ಕುಟುಂಬದ ಹಲವು ಸದಸ್ಯರು ಹಾಜರಿದ್ದರು. ಆಸ್ಪತ್ರೆಗೆ ಬಿಗಿ ಭದ್ರತೆ ಒದಗಿಸಲಾಗಿದೆ.ಇತ್ತೀಚಿಗಷ್ಟೇ ಐಶ್ವರ್ಯನಂತಹ ಮುದ್ದಾದ ಹೆಣ್ಣು ಮಗು ಬೇಕೆಂದು ಹಂಬಲಿಸಿದ್ದ ಪತಿ ಅಭಿಷೇಕ್ ಬಚ್ಚನ್ ಅವರು ಮಗುವಿನ ಜನನ ಕುರಿತು ಟ್ವಿಟರ್‌ನಲ್ಲಿ ಬರೆದಿದ್ದಾರೆ.ಮೊಮ್ಮಗಳ ಆಗಮನದ ಸುದ್ದಿ ಕೇಳಿ ಹೆಮ್ಮೆಯಿಂದ ಬೀಗುತ್ತಿರುವ ಅಜ್ಜ ಅಮಿತಾಭ್ ಬಚ್ಚನ್ ಅವರ ಸಂತಸ ಮೇರೆ ಮೀರಿದೆ. ಅವರು ಸಹ ತಮ್ಮ ಟ್ವಿಟರ್‌ನಲ್ಲಿ `ನಾನು ಮುದ್ದಾದ ಹೆಣ್ಣು ಮಗುವಿಗೆ ತಾತನಾಗಿದ್ದು ಭಾವಪರವಶಗೊಳಿಸಿದೆ~ ಎಂದು ಟ್ವಿಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry