ಐಶ್ವರ್ಯ ರೈ ಆದರ್ಶ ತಾಯಿ

7

ಐಶ್ವರ್ಯ ರೈ ಆದರ್ಶ ತಾಯಿ

Published:
Updated:

ಕೋಲ್ಕತ್ತ (ಪಿಟಿಐ): ಅಮಿತಾಭ್ ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ಬಾಲಿವುಡ್‌ನ ಖ್ಯಾತನಾಮ ಆದರ್ಶ ತಾಯಂದಿರ ಸಾಲಿನಲ್ಲಿ ಅಗ್ರ ಶ್ರೇಣಿಯಲ್ಲಿದ್ದಾರೆ. ಹಾಲಿವುಡ್‌ನಲ್ಲಿ ಏಂಜಲೀನಾ ಜೋಲಿ ಇರುವಂತೆ ಐಶ್ವರ್ಯ ಬಾಲಿವುಡ್‌ನಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.ಈ ಸಂಬಂಧ 38 ವರ್ಷದ ಮಾಜಿ ವಿಶ್ವ ಸುಂದರಿಗೆ ಶೇ 54ರಷ್ಟು ಮತಗಳು ಬಂದಿದ್ದರೆ, ನಂತರದ ಸಾಲಿನಲ್ಲಿರುವ ಕರಿಷ್ಮಾ ಕಪೂರ್ ಅವರಿಗೆ ಶೇ 27ರಷ್ಟು ಮತಗಳು ದೊರೆತಿವೆ.ಅಭಿಷೇಕ್ ಐಶ್ವರ್ಯ ದಂಪತಿಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಹೆಣ್ಣು ಮಗು ಜನಿಸಿದೆ. `ಆದರ್ಶ ತಾಯಿ~ ಎಂಬ ಗೌರವಕ್ಕೆ ಬಾಲಿವುಡ್‌ನಲ್ಲಿ ಎಲ್ಲ ರೀತಿಯಿಂದಲೂ ಯೋಗ್ಯವಾಗಿರುವ ನಟಿ ಯಾರು ಎಂಬ ಪ್ರಶ್ನೆಯನ್ನು ಮುಂದಿಟ್ಟು,  ವಿವಾಹಕ್ಕೆ ಸಂಬಂಧಿಸಿದ ವೆಬ್‌ಸೈಟ್ ಶಾದಿ ಡಾಟ್‌ಕಾಮ್ ನಡೆಸಿದ ಸಮೀಕ್ಷೆಯಿಂದ ಈ ಅಂಶ ಹೊರಬಿದ್ದಿದೆ.ಮಲೈಕಾ ಅರೋರಾ ಖಾನ್ ಮತ್ತು ಲಾರಾ ದತ್ತಾ ಕೂಡ ಸ್ಪರ್ಧೆಯಲ್ಲಿದ್ದರು.  ಮಾಜಿ `ಕನಸಿನ ಕನ್ಯೆ~ ಹೇಮಾ ಮಾಲಿನಿ ಮತ್ತು ಅವರ ಪುತ್ರಿ ಇಷಾ ಡಿಯೋಲ್ ಅತ್ಯುತ್ತಮ ತಾಯಿ- ಮಗಳು ಜೋಡಿ ಎಂದು ಅತಿ ಹೆಚ್ಚಿನ ಜನ ಅಭಿಪ್ರಾಯ ಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry