ಸೋಮವಾರ, ಜನವರಿ 27, 2020
17 °C

ಐಶ್‌, ಸೂಪರ್ ಮಮ್ಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಶ್‌, ಸೂಪರ್ ಮಮ್ಮಿ

ಐಶ್ವರ್ಯಾ ರೈ ‘ಸೂಪರ್ ಮಾಮ್’ ಹೀಗೆಂದವರು ಅಭಿಷೇಕ್‌ ಬಚ್ಚನ್. ಸೆಲೆಬ್ರಿಟಿ ಮಕ್ಕಳೆಂದರೆ ಎಲ್ಲರಿಗೂ ಒಂದು ರೀತಿಯ ಕುತೂಹಲವಿರುತ್ತದೆ. ಮಗು ತಾಯಿಯ ಹಾಗೆ ಇದೆಯೋ, ತಂದೆಯ ಹಾಗೆ ಇದೆಯೋ ಎಂಬ ಕಾತರದ ಕಣ್ಣುಗಳು ಆ ಮಗುವಿನ ಸುತ್ತ ಸುತ್ತುತ್ತಿರುತ್ತವೆ. ಇನ್ನು ವಿಶ್ವಸುಂದರಿಯ ಮಗು ಎಂದರೆ ಕೇಳಬೇಕೆ? ಕ್ಯಾಮೆರಾ ಕಣ್ಣುಗಳು ಸದಾ ತೆರೆದಿರುತ್ತವೆ. ಈ ಎಲ್ಲಾ ವಿಚಾರಗಳಿಂದ ಮಗುವನ್ನು ರಕ್ಷಿಸಿ ಅದಕ್ಕೆ ಸಹಜವಾದ ಬಾಲ್ಯವನ್ನು ಕೊಡುವುದು ಸೆಲೆಬ್ರಿಟಿಗಳಿಗೆ ದೊಡ್ಡ ತಲೆನೋವೇ ಬಿಡಿ.ಇದೇ ಹಿನ್ನೆಲೆಯಲ್ಲಿ ನಟಿ ಐಶ್ವರ್ಯಾ ರೈ ಮಗಳು ಆರಾಧ್ಯಾಳನ್ನು ಈ ಮನೋರಂಜನಾ ಕ್ಷೇತ್ರದಿಂದ ದೂರವಿಟ್ಟು ಬಾಲ್ಯವನ್ನು ಪ್ರೀತಿಯಿಂದ ಅನುಭವಿಸಲು ಬಿಟ್ಟಿದ್ದಾರಂತೆ.‘ಐಶ್ವರ್ಯಾ ಅವರ ವೃತ್ತಿಪರತೆಯ ಬಗ್ಗೆ ಪ್ರಶ್ನಿಸುವ ಹಾಗೆಯೇ ಇಲ್ಲ. ತಾಯಿಯಾಗಿಯೂ ಆಕೆ ಸೂಪರ್‌. ಸಹನಟಿಯಾಗಿ ಅವಳ ಜತೆ ಕೆಲಸ ಮಾಡಲೂ ನನಗೆ ಯಾವಾಗಲೂ ಇಷ್ಟ’ ಎಂದು ಮುದ್ದಿನ ಹೆಂಡತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಅಭಿಷೇಕ್ ಬಚ್ಚನ್.ಅಭಿಷೇಕ್‌ ಬಾಲ್ಯದ ಸಮಯದಲ್ಲಿ ಮಾಧ್ಯಮಗಳು ಅಷ್ಟಾಗಿ ಇರಲಿಲ್ಲವಂತೆ. ಹೀಗಾಗಿ ಮಾಧ್ಯಮದಿಂದ ಭಯಪಡುವ ಅವಶ್ಯಕತೆ ಅವರಿಗೆ ಎದುರಾಗಿರಲಿಲ್ಲ. ಆದರೀಗ ಕಾಲ ಬದಲಾಗಿದೆ. ಮಕ್ಕಳು ಮಕ್ಕಳಂತೆ ಬೆಳೆಯುವಂತೆ ನೋಡಿಕೊಳ್ಳಬೇಕಿದೆ. ಆರಾಧ್ಯಾ ಅವಳಿಷ್ಟದಂತೆ ಬದುಕಬೇಕು. ಅವಳ ಬಾಲ್ಯದ ಸುಖವನ್ನು ಸಂಪೂರ್ಣವಾಗಿ ಅನುಭವಿಸುವಂತೆ ಮಾಡಬೇಕು ಎನ್ನುವುದು ಐಶ್ವರ್ಯಾ ಹಾಗೂ ಅಭಿಷೇಕ್‌ ಕಾಳಜಿ. ಹೀಗಾಗಿ ಮಗಳ ವಿಷಯದಲ್ಲಿ ಮಾಧ್ಯಮಗಳು ಮೂಗುತೂರಿಸುವುದು ಬೇಡ ಎಂದು ಅಭಿಷೇಕ್‌ ಮನವಿ ಮಾಡಿಕೊಂಡಿದ್ದಾರೆ.ಯಾವ ಸಿನಿಮಾ ತನಗೆ ಸರಿ ಹೊಂದುತ್ತದೆ ಎಂಬುದರ ಬಗ್ಗೆ ಐಶ್ವರ್ಯಾಗೆ ಚೆನ್ನಾಗಿ ತಿಳಿದಿದೆ. ಸಿನಿಮಾ ಆಯ್ಕೆ ವಿಷಯದಲ್ಲಿ ಐಶ್ವರ್ಯಾಗೆ ಸಂಪೂರ್ಣ ಸ್ವಾತಂತ್ರ್ಯವಿದೆಯಂತೆ. ಅಭಿಷೇಕ್‌ ತಾನೂ ಐಶ್ವರ್ಯಾ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.ಅಂದಹಾಗೆ ನಿಜಜೀವನದ ಈ ಜೋಡಿಗಳು ಪ್ರಹ್ಲಾದ್‌ ಕಕ್ಕರ್‌ ಅವರ ಮುಂದಿನ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆಯಂತೆ.‘ಆರಾಧ್ಯಾಳ ಹೆತ್ತವರಾಗಿ ಅವಳಿಗೆ ಸಂತಸದ ಹಾಗೂ ಆರೋಗ್ಯವಂತ ಬದುಕು ನೀಡುವುದು ನಮ್ಮ ಕರ್ತವ್ಯ. ನಮ್ಮ ಮನೆಗೆ ವ್ಯಾಪಾರಿ ನಿಯತಕಾಲಿಕೆಯೂ ಸೇರಿದಂತೆ ಯಾವುದೇ ರೀತಿಯ ನಿಯತಕಾಲಿಕೆಗಳಿಗೆ ಪ್ರವೇಶವಿಲ್ಲ. ನಾನು ಸಿನಿಮಾ ಸುದ್ದಿ ಇರುವ ಪತ್ರಿಕೆ ಓದಿದ್ದು 18 ವರ್ಷದವನಾಗಿದ್ದಾಗ. ನನ್ನ ಅಪ್ಪ–ಅಮ್ಮ ನನ್ನನ್ನು ಮನೋರಂಜನಾ ಪ್ರಪಂಚದಿಂದ ದೂರವಿಟ್ಟಿದ್ದರು.’ –ಅಭಿಷೇಕ್‌ ಬಚ್ಚನ್‌

ಪ್ರತಿಕ್ರಿಯಿಸಿ (+)