ಐಷಾರಾಮಿ ಟ್ರೆಂಡ್ಸ್ ಶುರು

7

ಐಷಾರಾಮಿ ಟ್ರೆಂಡ್ಸ್ ಶುರು

Published:
Updated:

ಒಂದೆಡೆ ರಸ್ತೆಗಳು ಸರಿಯಿಲ್ಲ, ಟ್ರಾಫಿಕ್ ಜಾಮ್ ಕಿರಿಕಿರಿ ಕಡಿಮೆಯಾಗಿಲ್ಲ, ಪಾರ್ಕಿಂಗ್‌ಗೆ ವಿಶಾಲ ಮೈದಾನಗಳಿಲ್ಲ, ಇತ್ತ ಸಂಚಾರದಟ್ಟಣೆಯೂ ಮಿತಿಮೀರುತ್ತಿದೆ... ಇಂತಹ ಹಲವಾರು ತಾಪತ್ರಯಗಳ ಮಧ್ಯೆಯೂ ತಮ್ಮದೇ ಕಾರು ಬಯಸುವವರ ಸಂಖ್ಯೆ ಮಾತ್ರ ಒಂದಿಷ್ಟೂ ಇಳಿದಿಲ್ಲ.

ಕಾರು ಖರೀದಿಸುವ ಬಯಕೆ ದಿನೇದಿನೇ ಹೆಚ್ಚುತ್ತಿದೆ. ಅದೀಗ ಅನಿವಾರ್ಯ ಎಂದುಕೊಂಡವರೂ ಉಂಟು. ಅದರಲ್ಲೂ ಐಷಾರಾಮಿ ಕಾರುಗಳನ್ನು ಕೊಳ್ಳುವುದು ಈಗ ಪ್ರತಿಷ್ಠೆಯ ಸಂಗತಿ.ಈ ದುಬಾರಿ ಕಾರುಗಳನ್ನು ಬಯಸುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಲೆಂದೇ ಅನೇಕ ಕಾರು ಕಂಪೆನಿಗಳು ಮಾರುಕಟ್ಟೆಯಲ್ಲಿ ಬಗೆಬಗೆಯ ಕಾರುಗಳೊಂದಿಗೆ ಸ್ಪರ್ಧೆಗಿಳಿಯುತ್ತಿವೆ. ಅದೇ ರೀತಿ ತನ್ನ ವಿಶಿಷ್ಟ ವಿನ್ಯಾಸ ಮತ್ತು ತನ್ನದೇ ವಿಭಿನ್ನತೆಯಿಂದ ಐಷಾರಾಮಿ ಕಾರುಗಳ ತಯಾರಿಕೆಯಲ್ಲಿ ಮುಂದಿರುವ ಮರ್ಸಿಡೀಸ್ ಬೆಂ್ ತನ್ನ ಗ್ರಾಹಕರನ್ನು ತೃಪ್ತಿಪಡಿಸಲೆಂದೇ ಹೊಸದೊಂದು ಯೋಜನೆಯನ್ನು ರೂಪಿಸಿದೆ.`ಗೋ ಟು ಕಸ್ಟಮರ್ಸ್‌~ ಎಂಬ ಉದ್ದೇಶದೊಂದಿಗೆ ಯುಬಿ ಸಿಟಿಯಲ್ಲಿ  ಟ್ರೆಂಡ್ಸ್ ಎಂಬ ಸ್ಟೋರ್‌ಗೆ ಮರ್ಸಿಡೀಸ್ ಬೆಂ್ ಕಂಪನಿ ಚಾಲನೆ ನೀಡಿದೆ. ಬೆಂ್ನಿಂದ ಆಟೊಮೊಬೈಲ್ ಕ್ಷೇತ್ರದಲ್ಲಿನ ಬೆಳವಣಿಗೆ, ನೂತನ ಆವಿಷ್ಕಾರ, ಹೊಸ ಹೊಸ ತಂತ್ರಜ್ಞಾನ, ಯಂತ್ರಗಳು, ಈ ಎಲ್ಲಾ ಮಾಹಿತಿಯನ್ನೂ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಮಳಿಗೆ ಆರಂಭವಾಗಿದೆ.ಅದರಲ್ಲೂ ಹೈಟೆಕ್ ಸಿಟಿಯಾಗಿರುವ ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಜನರೂ ಇರುವುದರಿಂದ ಈ ಮಳಿಗೆಗೆ ಹೆಚ್ಚು ಅವಶ್ಯಕತೆ  ಇದೆ ಎನ್ನುತ್ತಾರೆ ಕಂಪೆನಿಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕ ದೇಬಶೀಶ್ ಮಿತ್ರ.ಗ್ರಾಹಕರೊಂದಿಗೆ ಉತ್ತಮ ಸಂವಹನ ಸೃಷ್ಟಿಸಿಕೊಳ್ಳುವ ಮತ್ತು ಗ್ರಾಹಕರಿಗೆ ಇನ್ನೂ ಹತ್ತಿರವಾಗುವ ಪ್ರಯತ್ನ ಈ ಟ್ರೆಂಡ್ಸ್ ಆಗಿದೆ.`ಗ್ರಾಹಕರು ನಮ್ಮ ಬಗ್ಗೆ ತಿಳಿದುಕೊಳ್ಳಲು ಸುಲಭ ದಾರಿಯನ್ನು ಒದಗಿಸುವ ನಿಟ್ಟಿನಲ್ಲಿ ಈ ಸ್ಟೋರ್ ಆರಂಭವಾಗಿದೆ. ಈ ಮಳಿಗೆಯೊಂದಿಗೆ ಮರ್ಸಿಡೀಸ್ ಬೆಂ್ ಇಂಡಿಯಾದ ಕೊಡುಗೆಯಾಗಿರುವ ಎಎಂಜಿ ಪರ್ಫಾರ್ಮೆನ್ಸ್ ಡ್ರೈವಿಂಗ್ ಅಕಾಡೆಮಿ ಕೋರ್ಸ್‌ಗೂ ತಮ್ಮ ಹೆಸರು ದಾಖಲಿಸುವ ವಿಶೇಷ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಿದೆ~ ಎಂದು ತಿಳಿಸಿದರು. ಎಎಂಜಿ ಮಾದರಿಯ ಕಾರನ್ನು ಹೇಗೆ ಓಡಿಸಬೇಕು ಎಂಬುದನ್ನು ಅಚ್ಚುಕಟ್ಟಾಗಿ ಹೇಳಿಕೊಡುವ ಕೋರ್ಸ್ ಇದು.ಇದೇ ಸಂದರ್ಭದಲ್ಲಿ ಕೆಲವು ದಿನಗಳ  ಹಿಂದಷ್ಟೆ ನಡೆದ ದೆಹಲಿ ಆಟೊ ಎಕ್ಸ್‌ಪೊದಲ್ಲಿ ಪ್ರದರ್ಶನಕ್ಕಿಟ್ಟಿದ್ದ ನೂತನ ಡಿಟಿಎಂ ರೇಸಿಂಗ್ ಕಾರು  ಮತ್ತು ಎಸ್‌ಎಲ್‌ಎಸ್ ಎಎಂಜಿ ರೋಡ್‌ಸ್ಟರ್ ಕಾರನ್ನು ಯುಬಿಸಿಟಿಯಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಕಂಪೆನಿಗಳಿಂದ ಹೊಸದಾಗಿ ತಯಾರಾಗುವ ಕಾರುಗಳ ಬಗ್ಗೆ ಇನ್ನು ಮುಂದೆ ಸುಲಭವಾಗಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ಕಾರು ಖರೀದಿಸುವವರಿಗೆ ಶ್ರೇಷ್ಠ ಗ್ರಾಹಕರಾದ ತೃಪ್ತಿ. ಮರ್ಸಿಡಿಸ್ ಬೆಂ್ ಕಂಪೆನಿಗೆ ಪ್ರತಿಷ್ಠಿತರ ಸಂಖ್ಯೆಯನ್ನು ಹೆಚ್ಚಿಸಿದ ಸಾರ್ಥಕ್ಯ.

-

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry