ಭಾನುವಾರ, ಜನವರಿ 19, 2020
28 °C

ಐಷಾರಾಮಿ ವಿಲ್ಲಾ: ಬ್ರಿಗೇಡ್ ಆರ್ಚರ್ಡ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿರುವ ಬ್ರಿಗೇಡ್ ಸಮೂಹವು, ತನ್ನ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ತನ್ನ ಮೊದಲ ವಿಲ್ಲಾ ಯೋಜನೆ `ಬ್ರಿಗೇಡ್ ಆರ್ಚರ್ಡ್ಸ್~ಗೆ ಚಾಲನೆ ನೀಡಿದೆ.  ಈ ಬೃಹತ್ ಸಮಗ್ರ ವಸತಿ ಯೋಜನೆಯನ್ನು  ಬೆಂಗಳೂರಿನ ದೇವನಹಳ್ಳಿಯ ಬಳಿ ಆರಂಭಿಸಲಿದೆ.ಸಮಗ್ರ  ಸೌಲಭ್ಯ ಒಳಗೊಂಡ ಯೋಜನೆ ಇದಾಗಿದೆ. ನೂರು ಎಕರೆ ವಿಸ್ತೀರ್ಣದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಐಷಾರಾಮಿ ವಿಲ್ಲಾ,  ಅಪಾರ್ಟ್‌ಮೆಂಟ್‌ಗಳು,  ಸಾಮಾಜಿಕ ಮೂಲಸೌಕರ್ಯಗಳೂ ಇಲ್ಲಿ ಇರಲಿವೆ. ಶಾಲೆ, ಅತ್ಯಾಧುನಿಕ ಕ್ರೀಡಾಂಗಣ, ಕಚೇರಿ ಸ್ಥಳಗಳು, ಶಾಪಿಂಗ್, ಮಲ್ಟಿಫ್ಲೆಕ್ಸ್, ಆರೋಗ್ಯ ಶುಶ್ರೂಷೆ,  ಉದ್ಯಾನಗಳು, ಮುಂತಾದವು ಇಲ್ಲಿ ಇರಲಿವೆ. ಜೊತೆಗೆ ಪೊಲೀಸ್ ಸ್ಟೇಷನ್ ಮತ್ತು ಅಗ್ನಿಶಾಮಕ ಕೇಂದ್ರಗಳಿಗೂ ಅವಕಾಶ ಇದೆ.100 ಎಕರೆಗಳಿಗೂ ಹೆಚ್ಚಿನ ಪ್ರದೇಶದಲ್ಲಿ ಈ ಯೋಜನೆ ಅಸ್ತಿತ್ವಕ್ಕೆ ಬರುತ್ತಿದೆ. ಒಟ್ಟು ್ಙ 2000 ಕೋಟಿಗಳನ್ನು ಈ ಯೋಜನೆಗೆ ಹೂಡಿಕೆ ಮಾಡಲಾಗುತ್ತಿದೆ. 5 ವರ್ಷಗಳಲ್ಲಿ ಪೂರ್ಣವಾಗಲಿದೆ.   ಬ್ರಿಗೇಡ್ ಗುಂಪಿನ ಮೊದಲ  ವಿಲ್ಲಾ (ವಿಲಾಸಿ ಸ್ವತಂತ್ರ ಮನೆ) ಯೋಜನೆ ಇದಾಗಿದೆ. 4 ಬೆಡ್‌ರೂಮ್ ವಿಲ್ಲಾದ ಗಾತ್ರ 4000 ದಿಂದ 4800 ಚದರ ಅಡಿಗಳಷ್ಟು ಇರಲಿದೆ. ಈ ವಿಲ್ಲಾಗಳ ಬೆಲೆ ್ಙ 2.9 ಕೋಟಿಗಳಿಂದ ಆರಂಭಗೊಳ್ಳಲಿದೆ.ಯೋಜನಾ ಸ್ಥಳವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಿದೆ.  ಸೌರ ವಿದ್ಯುತ್ ದೀಪ,  ಮಳೆ ನೀರು ಸಂಗ್ರಹ, ನೈಸರ್ಗಿಕ ಕೆರೆಗಳ ಪುನರುಜ್ಜೀವನ ಈ ಯೋಜನೆಯ ಇತರ ವೈಶಿಷ್ಟ್ಯಗಳಾಗಿವೆ.ಬಹು ಬಗೆಯ ವಸತಿ ಆಯ್ಕೆಗಳು ಜೊತೆಗೆ ಅತ್ಯುತ್ತಮ ಸಾಮಾಜಿಕ ಮೂಲ ಸೌಕರ್ಯಗಳೂ ಇಲ್ಲಿ ಲಭ್ಯವಾಗಿರಲಿವೆ.ವಿಸ್ತಾರವಾದ ಹಸಿರು ವಾತಾವರಣವನ್ನು ಸೃಷ್ಟಿಸಲು ಮರಗಳನ್ನು ಉಳಿಸಿ ನೀರಿನ ಬಳಕೆಯನ್ನು ಕಡಿಮೆ ಮಾಡಲು ಯೋಜಿಸಲಾಗಿದೆ.  ಈ ಯೋಜನೆ ನಮ್ಮ ಬ್ರಾಂಡ್ ಚಿಂತನೆಯಾಗಿರುವ- `ಉತ್ತಮ ಜೀವನ ಗುಣಮಟ್ಟಕ್ಕಾಗಿ~ ಎಂಬುದನ್ನು ಸಮರ್ಥವಾಗಿ ಬಿಂಬಿಸುತ್ತದೆ ಎಂದು ಬಿಸಿವಿ ಡೆವಲಪರ್ಸ್‌ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ‌್ಯನಿರ್ವಾಹಕ ಅಧಿಕಾರಿ ಕೈಲಾಶ್ ಅದ್ವಾನಿ ಅಭಿಪ್ರಾಯಪಟ್ಟಿದ್ದಾರೆ.ಯೋಜನೆಯ ಮಾಸ್ಟರ್ ಪ್ಲಾನ್ ಅನ್ನು ವಿಶ್ವಖ್ಯಾತ ವಾಸ್ತುಶಿಲ್ಪಿ ಸಿಯಾರ್ಟರ್‌ನ ಎನ್‌ಬಿಬಿಜೆ ಮತ್ತು ಸ್ಥಳೀಯವಾಗಿ ಸಿಎನ್‌ಟಿ ಆರ್ಕಿಟೆಕ್ಟ್ಸ್ ವಿನ್ಯಾಸಗೊಳಿಸಿದ್ದಾರೆ. ಅಂತಾರಾಷ್ಟ್ರೀಯ ಲ್ಯಾಂಡ್‌ಸ್ಕೇಪಿಂಗ್ ವಾಸ್ತುಶಿಲ್ಪಿಗಳಾದ ಟ್ರೊಪಾಂ್ಲಡ್ ಅವರು ಲ್ಯಾಂಡ್‌ಸ್ಕೇಪ್ ವಿನ್ಯಾಸಗೊಳಿಸಲಿದ್ದು ಮಾದರಿ ವಿಲ್ಲಾಗಳ ಒಳಾಂಗಣವನ್ನು ಸಂದೀಪ್ ಕೋಸ್ಲಾ  ವಿನ್ಯಾಸಗೊಳಿಸಲಿದ್ದಾರೆ.  ಮಾಹಿತಿಗೆ ಅಂತರಜಾಲ ತಾಣ ಡಿಡಿಡಿ.ಚ್ಟಿಜಿಜಛಿಟ್ಟ್ಚಚ್ಟ.್ಚಟಞಕ್ಕೆ ಭೇಟಿ ನೀಡಬಹುದು. 

ಪ್ರತಿಕ್ರಿಯಿಸಿ (+)