ಐಸಿಆರ್‌ಐ ವಿದ್ಯಾರ್ಥಿಗಳ ಪದವಿ ಸಂಭ್ರಮ

7

ಐಸಿಆರ್‌ಐ ವಿದ್ಯಾರ್ಥಿಗಳ ಪದವಿ ಸಂಭ್ರಮ

Published:
Updated:
ಐಸಿಆರ್‌ಐ ವಿದ್ಯಾರ್ಥಿಗಳ ಪದವಿ ಸಂಭ್ರಮ

ಇನ್‌ಸ್ಟಿಟ್ಯೂಟ್ ಆಫ್ ಕ್ಲಿನಿಕಲ್ ರಿಸರ್ಚ್‌ನ (ಐಸಿಆರ್‌ಐ) ಎಂಎಸ್‌ಸಿ ಕ್ಲಿನಿಕಲ್ ರಿಸರ್ಚ್‌ನ ತೊಂಬತ್ತು ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ, ಎಲ್ಲೆ ಮೀರಿದ ಸಂಭ್ರಮ, ಸಡಗರಗಳಿಗೆ ಸಾಕ್ಷಿಯಾಗಿತ್ತು.ಪದವಿ ಪಡೆದ ವಿದ್ಯಾರ್ಥಿಗಳು ತಲೆಗವುಸನ್ನು ಮೇಲಕ್ಕೆ ತೂರಿ ಹರ್ಷೋದ್ಗಾರ ಮಾಡಿದರು. ಬದುಕಿನ ಪ್ರಮುಖ ಘಟ್ಟವನ್ನು ಪ್ರವೇಶಿಸುತ್ತಿದ್ದೇವೆ ಎಂಬ ಖುಷಿ ಅವರ ಮೊಗದಲ್ಲಿ ಎದ್ದು ಕಾಣುತ್ತಿತ್ತು.ಸಿಜಿಎಚ್‌ಎಸ್ ಬೆಂಗಳೂರಿನ ಹೆಚ್ಚುವರಿ ನಿರ್ದೇಶಕ ಡಾ. ಷಣ್ಮುಗಾನಂದ ಅತಿಥಿಯಾಗಿದ್ದರು. ಬ್ರಿಟನ್‌ನ ಕ್ರೇನ್‌ಫೀಲ್ಡ್ ವಿವಿಯ ಎಂಎಸ್‌ಸಿ ಕ್ಲಿನಿಕಲ್ ಟೆಕ್ನಾಲಜಿಯ ಪಠ್ಯಕ್ರಮ ನಿರ್ದೇಶಕ ಪ್ರೊ. ಜಾನ್ ಹಾಟನ್,ಆರೋಗ್ಯ ಕಾರ‌್ಯಾಚರಣೆ ವಿಭಾಗದ ನಿರ್ದೇಶಕ ಪ್ರೊ. ಪೀಟರ್ ಲಿ ಹಾಜರಿದ್ದರು.ಐಸಿಆರ್‌ಐ ಅಧ್ಯಕ್ಷ  ಎಸ್.ಆರ್.ಡುಗಲ್ ಮಾತನಾಡಿ, ಇಲ್ಲಿ ನಡೆಯುವ ಪ್ರತಿಯೊಂದು ಘಟಿಕೋತ್ಸವವೂ ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಎಲ್ಲ ವಿದ್ಯಾರ್ಥಿಗಳ ಬಗ್ಗೆ ನಾವು ಹೊಂದಿರುವ ಶೈಕ್ಷಣಿಕ ಬದ್ಧತೆಗೆ ಸಿಕ್ಕ ಬಹುಮಾನ~ ಎಂದರು.  ಪ್ರಾಚಾರ್ಯ ಡಾ. ಪ್ರವೀಣ ಕೋಟೇಶ್ವರ್ ಮಾತನಾಡಿ, ತನ್ನ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಜಾಗತಿಕವಾಗಿ ತೆರೆದುಕೊಳ್ಳುವ ಅವಕಾಶಗಳನ್ನು ಐಸಿಆರ್‌ಐ ಕಲ್ಪಿಸುತ್ತಿದೆ ಎಂದು ಹೇಳಿದರು.ಕ್ಲಿನಿಕಲ್ ರಿಸರ್ಚ್ ಕ್ಷೇತ್ರ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿದ್ದು ಅನೇಕ ಔಷಧ ಸಂಬಂಧಿ ಸಂಸ್ಥೆಗಳಲ್ಲಿ ಈ ಪದವೀಧರರಿಗೆ ತುಂಬ ಬೇಡಿಕೆಯಿದೆ. ಐಸಿಆರ್‌ಐ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry