ಐಸಿಎಆರ್‌ಗೆ ಸರ್ದಾರ್ ಪಟೇಲ್ ಪ್ರಶಸ್ತಿ

ಬುಧವಾರ, ಜೂಲೈ 24, 2019
28 °C

ಐಸಿಎಆರ್‌ಗೆ ಸರ್ದಾರ್ ಪಟೇಲ್ ಪ್ರಶಸ್ತಿ

Published:
Updated:

ಬೆಂಗಳೂರು: ಆಡುಗೋಡಿಯಲ್ಲಿನ ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಗೆ  (ಐಸಿಎಆರ್) 2012 ನೇ ಸಾಲಿನ ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯ ಸರ್ದಾರ್ ಪಟೇಲ್ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಸಂಸ್ಥೆಯ ನಿರ್ದೇಶಕ ಡಾ.ಸಿ.ಎಸ್.ಪ್ರಸಾದ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ಸಂಸ್ಥೆಯು ಪ್ರಾಣಿ ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನದಲ್ಲಿ ಮೂಲಭೂತ ಸಂಶೋಧನೆಯಲ್ಲಿ ತೊಡಗಿದ್ದು ರೈತ ಸ್ನೇಹಿ ತಂತ್ರಜ್ಞಾನ ರೂಪಣೆ, ತರಬೇತಿ ಹಾಗೂ ಅಗತ್ಯ ಮಾಹಿತಿಯನ್ನು ಒದಗಿಸುತ್ತಿದೆ.ಪ್ರಶಸ್ತಿಯು ಪ್ರಮಾಣಪತ್ರ ಹಾಗೂ ರೂ10 ಲಕ್ಷಗಳನ್ನು ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry