ಬುಧವಾರ, ಏಪ್ರಿಲ್ 21, 2021
24 °C

ಐಸಿಎಡಿಆರ್ ಅಧ್ಯಕ್ಷ ಸ್ಥಾನಕ್ಕೆ ಭಾರದ್ವಾಜ್ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಲಾಭದಾಯಕ ಹುದ್ದೆ ವಿವಾದಕ್ಕೆ ಸಿಲುಕಿದ್ದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಆಲ್ಟರ್‌ನೇಟಿವ್ ಡಿಸ್ಪ್ಯೂಟ್ ರೆಸೊಲ್ಯೂಷನ್ (ವಿವಾದಗಳಿಗೆ ಪರ್ಯಾಯ ಪರಿಹಾರ ಸೂಚಿಸುವ ಅಂತರರಾಷ್ಟ್ರೀಯ ಕೇಂದ್ರ - ಐಸಿಎಡಿಆರ್) ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.‘ಭಾರದ್ವಾಜ್ ಐಸಿಎಡಿಆರ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಖಾಸಗಿ ಕಾರ್ಯ ನಿಮಿತ್ತ ಶುಕ್ರವಾರ ದೆಹಲಿಯಲ್ಲೇ ಇದ್ದರೂ ಅಂದು ನಡೆದ ಸಂಸ್ಥೆಯ ಸಾಮಾನ್ಯ ಸಭೆಗೆ ಹಾಜರಾಗಿಲ್ಲ’ ಎಂದು ರಾಜಭವನದ ಮೂಲಗಳು ತಿಳಿಸಿವೆ.ಐಸಿಎಡಿಆರ್ ಸಂಸ್ಥೆ ಕೇಂದ್ರ ಸರ್ಕಾರದಿಂದ ವಾರ್ಷಿಕ 11 ಕೋಟಿ ರೂಪಾಯಿ ಅನುದಾನ ಪಡೆಯುವ ಕಾರಣ ಭಾರದ್ವಾಜ್ ಅವರು ಸಂಸ್ಥೆಯ ಅಧ್ಯಕ್ಷರಾಗಿರುವುದು ಲಾಭದಾಯಕ ಹುದ್ದೆಯನ್ನು ಹೊಂದಿದಂತೆ ಎಂದು ಕಾನೂನು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದರು.1995ರಲ್ಲಿ ಸಂಸ್ಥೆ ಆರಂಭವಾದಾಗಿನಿಂದಲೂ ಭಾರದ್ವಾಜ್ ಅವರೇ ಅಧ್ಯಕ್ಷರಾಗಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.