ಐಸಿಸಿಗೆ ಪತ್ರ ಬರೆದ ಸಚಿನ್ ತೆಂಡೂಲ್ಕರ್

ಸೋಮವಾರ, ಮೇ 20, 2019
28 °C

ಐಸಿಸಿಗೆ ಪತ್ರ ಬರೆದ ಸಚಿನ್ ತೆಂಡೂಲ್ಕರ್

Published:
Updated:

ಲಂಡನ್ (ಪಿಟಿಐ): ಎರಡೂ ತಂಡಗಳಿಗೆ ತಲಾ 25 ಒವರ್‌ಗಳಂತೆ ಒಟ್ಟು ನಾಲ್ಕು ಇನಿಂಗ್ಸ್‌ಗಳನ್ನು ಆಡಿಸುವುದು ಸೇರಿದಂತೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಹಲವು ಬದಲಾವಣೆ ಮಾಡುವುದು ಅಗತ್ಯವಿದೆ ಎಂದು ಸಚಿನ್ ತೆಂಡೂಲ್ಕರ್ ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ  ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹರೂನ್ ಲಾರ್ಗಟ್‌ಗೆ ಪತ್ರ ಬರೆದಿದ್ದಾರೆ.ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಬದಲಾವಣೆ ಅಗತ್ಯ ಎನ್ನುವುದನ್ನು ಮಾಸ್ಟರ್ ಬ್ಲಾಸ್ಟರ್ ಬಹಿರಂಗವಾಗಿಯೇ ಹೇಳಿದ್ದಾರೆ. ಪವರ್ ಪ್ಲೇನಲ್ಲಿ ಬದಲಾವಣೆ ತರಬೇಕು. 25 ಓವರ್‌ಗಳಲ್ಲಿ ಕೇವಲ 2 ಸಲ ಬ್ಯಾಟಿಂಗ್‌ನಲ್ಲಿ ಪವರ್ ಪ್ಲೇ ಇರಬೇಕು. ಪ್ರತಿಯೊಬ್ಬ ಬೌಲರ್‌ಗೆ ಕಡ್ಡಾಯವಾಗಿ 12 ಓವರ್ ಮಾಡುವ ಅವಕಾಶ ನೀಡಬೇಕು ಎಂದಿದ್ದಾರೆ. ಈಗ ಪ್ರತಿ ಬೌಲರ್ 10 ಓವರ್ ಮಾಡಲು ಮಾತ್ರ ಅವಕಾಶವಿದೆ.ಈಗಿರುವ ಪ್ರತಿ ಇನಿಂಗ್ಸ್‌ನ 50 ಓವರ್‌ಗಳ ಸಂಖ್ಯೆ ಕಡಿಮೆ ಮಾಡಬೇಕು. ಅದರ ಬದಲಾಗಿ 25 ಓವರ್‌ಗಳಿಗೆ ಒಂದು ಇನಿಂಗ್ಸ್‌ನಂತೆ ಪ್ರತ್ಯೇಕವಾಗಿ ನಾಲ್ಕು ಇನಿಂಗ್ಸ್ ಮಾಡಬೇಕು ಎನ್ನುವ ವಿಷಯ ಸಚಿನ್ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry