ಶುಕ್ರವಾರ, ಮೇ 7, 2021
25 °C

ಐಸಿಸಿ ಕಾರ್ಯಕ್ರಮಕ್ಕೆ ಭಾರತ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಮಹೇಂದ್ರ ಸಿಂಗ್ ದೋನಿ `ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್~ (ಕ್ರೀಡಾ ಮನೋಭಾವ) ಪ್ರಶಸ್ತಿಗೆ ಆಯ್ಕೆ ಆಗಿದ್ದರು. ಆದರೆ ಆಹ್ವಾನ ಪತ್ರ ಸಿಗದ ಕಾರಣ ಭಾರತ ಕ್ರಿಕೆಟ್ ತಂಡದ ಆಟಗಾರರು ಸೋಮವಾರ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನೇ ಬಹಿಷ್ಕರಿಸಿದರು.ಭಾರತದ ಆಟಗಾರರಿಗೆ ವಾರ್ಷಿಕ ಸಮಾರಂಭದಲ್ಲಿ ಈ ಬಾರಿ ಹೆಚ್ಚು ಪ್ರಶಸ್ತಿಗಳು ಸಿಗಲಿಲ್ಲ. ಆದರೆ ಏಕದಿನ ಚಾಂಪಿಯನ್ ಆಟಗಾರರ ಅನುಪಸ್ಥಿತಿ ಎದ್ದು ಕಾಣುತಿತ್ತು.`ಸೋಮವಾರ ಮಧ್ಯಾಹ್ನದವರೆಗೆ ನಮಗೆ ಆಹ್ವಾನ ಪತ್ರ ಲಭಿಸಿರಲಿಲ್ಲ. ಸಂಜೆ ಯಾರೋ ದೂರವಾಣಿ ಕರೆ ಮಾಡಿ ಆಹ್ವಾನಿಸಿದರು. ಆದರೆ ತಂಡದ ಅಲಭ್ಯತೆ ಬಗ್ಗೆ ಅವರು ಹೇಳಿದೆ. ಏಕೆಂದರೆ ನಾವು ಮತ್ತೊಂದು ಕಾರ್ಯಕ್ರಮಕ್ಕೆ ಅಷ್ಟರಲ್ಲಿ ಯೋಜನೆ ರೂಪಿಸಿದ್ದೆವು~ ಎಂದು ಭಾರತ ತಂಡದ ಮ್ಯಾನೇಜರ್ ಶಿವಲಾಲ್ ಯಾದವ್ ತಿಳಿಸಿದರು.ಆದರೆ `ಈ ಮೊದಲೇ ನಾವು ಬಿಸಿಸಿಐಗೆ ಆಹ್ವಾನ ಕಳುಹಿಸಿದ್ದೆವು~ ಎಂದು ಐಸಿಸಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.ನಾಯಕ ದೋನಿ ಟ್ರೆಂಟ್‌ಬ್ರಿಜ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ರನ್‌ಔಟ್ ಆಗಿದ್ದ ಇಂಗ್ಲೆಂಡ್ ತಂಡದ ಇಯಾನ್ ಬೆಲ್ ಅವರನ್ನು ಮತ್ತೆ ಕರೆಸಿ ಕ್ರೀಡಾ ಮನೋಭಾವ ಮೆರೆದಿದ್ದರು. ದೋನಿ ಸಮಾರಂಭದಲ್ಲಿ ಹಾಜರಿರದ ಕಾರಣ ಅವರ ಪರವಾಗಿ ಬೆಲ್‌ಗೆ ನಿರೂಪಕ ರವಿಶಾಸ್ತ್ರಿ ಆ ಟ್ರೋಫಿ ನೀಡಿದರು!ಐಸಿಸಿ ವಾರ್ಷಿಕ ಪ್ರಶಸ್ತಿ ಪಡೆದವರು: ವರ್ಷದ ಅತ್ಯುತ್ತಮ ಕ್ರಿಕೆಟಿಗ: ಜೊನಾಥನ್ ಟ್ರಾಟ್ (ಇಂಗ್ಲೆಂಡ್), ಅತ್ಯುತ್ತಮ ಏಕದಿನ ಕ್ರಿಕೆಟಿಗ ಹಾಗೂ ಜನರ ಆಯ್ಕೆಯ ಆಟಗಾರ: ಕುಮಾರ ಸಂಗಕ್ಕಾರ (ಶ್ರೀಲಂಕಾ), ಟೆಸ್ಟ್ ಕ್ರಿಕೆಟಿಗ: ಅಲಸ್ಟರ್ ಕುಕ್ (ಇಂಗ್ಲೆಂಡ್), ಉದಯೋನ್ಮುಖ ಆಟಗಾರ: ದೇವೇಂದ್ರ ಬಿಶೂ (ವೆಸ್ಟ್‌ಇಂಡೀಸ್),  ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್: ಮಹೇಂದ್ರ ಸಿಂಗ್ ದೋನಿ (ಭಾರತ), ಅತ್ಯುತ್ತಮ ಅಂಪೈರ್: ಅಲೀಮ್      ದಾರ್ (ಪಾಕಿಸ್ತಾನ). 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.