ಮಂಗಳವಾರ, ನವೆಂಬರ್ 12, 2019
28 °C

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಸಂಭವನೀಯರ ಪಟ್ಟಿಯಿಂದ ಸೆಹ್ವಾಗ್, ಹರಭಜನ್ ಹೊರಕ್ಕೆ

Published:
Updated:

ನವದೆಹಲಿ (ಪಿಟಿಐ): ಮುಂಬರುವ ಜೂನ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟೂರ್ನಿಯ ಸಂಭವನೀಯ ಆಟಗಾರರ ಪಟ್ಟಿ ಶನಿವಾರ ಪ್ರಕಟಗೊಂಡಿದ್ದು, ವಿರೇಂದ್ರಸೆಹ್ವಾಗ್ ಹಾಗೂ ಹರಭಜನಸಿಂಗ್ ಅವರನ್ನು ಕೈಬಿಡಲಾಗಿದೆ.ಇವರೊಂದಿಗೆ ಜಹೀರ್‌ಖಾನ್, ಚೇತೇಶ್ವರ ಪೂಜಾರ್, ಪ್ರಗ್ನಾನ್ ಓಜಾ  ಅವರೂ ಕೂಡ ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.ಆದರೆ ಪ್ರಸ್ತುತ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದ್ದ ಗೌತಮ್ ಗಂಭೀರ್ ಸ್ಥಾನಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ಆಲ್ ರೌಂಡರ್ ಪರ್ವೇಜ್ ರಸೂಲ್ ಸೇರಿದಂತೆ ಮಧ್ಯಪ್ರದೇಶದ ಆಲ್‌ರೌಂಡರ್ ಜಲಜ್ ಸಕ್ಸೇನಾ, ಪಂಜಾಬಿನ ವೇಗದ ಬೌಲರ್ ಸಿದ್ದಾರ್ಥ ಕೌಲ್ ಮಹಾರಾಷ್ಟ್ರದ ಮಧ್ಯಮ ಕ್ರಮಾಂಕ ಬ್ಯಾಟ್ಸಮನ್ ಕೇದಾರ್ ಜಾದವ್ ಹಾಗೂ ಮಧ್ಯಪ್ರದೇಶದ ವೇಗದ ಬೌಲರ್ ಈಶ್ವರ್ ಯಾದವ್ ಅವರು ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)