ಐಸಿಸಿ ವಿಶ್ವಕಪ್ ಕ್ರಿಕೆಟ್ 2011ಗೆ ಭಾರತ ತಂಡ

7

ಐಸಿಸಿ ವಿಶ್ವಕಪ್ ಕ್ರಿಕೆಟ್ 2011ಗೆ ಭಾರತ ತಂಡ

Published:
Updated:

ಚೆನ್ನೈ (ಪಿಟಿಐ): ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಸಮಯ ಬಂದಿದೆ. ಉಪಖಂಡದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ಗೆ ಎಂ.ಎಸ್.ದೋನಿ ನಾಯಕತ್ವದ 15 ಮಂದಿ ಆಟಗಾರರ ಹೆಸರನ್ನು ಪ್ರಕಟಿಸಲಾಗಿದೆ.

ಕೆ.ಶ್ರೀಕಾಂತ್ ಸಾರಥ್ಯದಲ್ಲಿ ಸೋಮವಾರ ಇಲ್ಲಿ ನಡೆದ ರಾಷ್ಟ್ರೀಯ ಆಯ್ಕೆ ಸಮಿತಿ ಸಭೆಯು ಯಾವುದೇ ಅಚ್ಚರಿಗೆ ಆಸ್ಪದ ನೀಡಿಲ್ಲ. ಆದರೆ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕರ್ನಾಟಕದ ಯಾವುದೇ ಆಟಗಾರ ಕೂಡ ಭಾರತ ತಂಡದಲ್ಲಿ ಸ್ಥಾನ ಪಡೆದಿಲ್ಲ.

ಆರ್.ವಿನಯ್‌ಕುಮಾರ್ ಅವರತ್ತ ಗಮನ ಹರಿಸದ ಆಯ್ಕೆದಾರರು

ವಿಶ್ವಕಪ್ ಪಂದ್ಯಗಳು ಭಾರತ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ನಡೆಯಲಿವೆ

ಭಾರತವು ಉದ್ಘಾಟನಾ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಮೀರ್‌ಪುರದಲ್ಲಿ ಫೆ.19ರಂದು ಆಡಲಿದೆ

‘ಬಿ’ ಗುಂಪಿನಲ್ಲಿ ಭಾರತವಿದ್ದು ಇದರಲ್ಲಿಯೇ ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಐರ್ಲೆಂಡ್ ಮತ್ತು ಹಾಲೆಂಡ್ ತಂಡಗಳಿವೆ

ಭಾರತ ತಂಡದಲ್ಲಿ 7 ಬ್ಯಾಟ್ಸ್‌ಮನ್, 4 ವೇಗಿಗಳು, 3 ಸ್ಪಿನ್ನರ್ ಹಾಗೂ 1 ಆಲ್‌ರೌಂಡರ್

ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಹಾಗೂ ಪ್ರವೀಣ್ ಕುಮಾರ್ ಗಾಯಗೊಂಡಿದ್ದು ವಿಶ್ವಕಪ್ ಹೊತ್ತಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು

ಆರ್.ಅಶ್ವಿನ್ ಮತ್ತು ಪಿಯೂಶ್ ಚಾವ್ಲಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದು ಕೊಂಚ ಅಚ್ಚರಿ

ರೋಹಿತ್ ಶರ್ಮ ಹಾಗೂ ವೇಗಿ ಎಸ್.ಶ್ರೀಶಾಂತ್ ತಂಡದಲ್ಲಿಲ್ಲ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry