ಐ-ಕೆನ್ ಸೈಂಟಿಫಿಕ್ ಲ್ಯಾಬ್‌ಗೆ ತಜ್ಞರ ಭೇಟಿ

7

ಐ-ಕೆನ್ ಸೈಂಟಿಫಿಕ್ ಲ್ಯಾಬ್‌ಗೆ ತಜ್ಞರ ಭೇಟಿ

Published:
Updated:
ಐ-ಕೆನ್ ಸೈಂಟಿಫಿಕ್ ಲ್ಯಾಬ್‌ಗೆ ತಜ್ಞರ ಭೇಟಿ

ಗುಲ್ಬರ್ಗ: ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯಲ್ಲಿ ಐ-ಕೆನ್ ಸೈಂಟಿಫಿಕ್ ಎಂಬ ವಿನೂತನ ವಿಜ್ಞಾನ ಪ್ರಾತ್ಯಕ್ಷಿಕೆ ಆರಂಭಿಸಲಾಗಿದೆ. ವಿಜ್ಞಾನದ ನೂತನ ಮಾದರಿಗಳನ್ನು ಸ್ಥಳದಲ್ಲೇ ತಯಾರಿಸುವ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನಿಡಲಾಗುತ್ತಿದೆ. ವೈಜ್ಞಾನಿಕ ಅಭಿರುಚಿ, ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವುದು ಈ ತರಬೇತಿ ಉದ್ದೇಶ ಎಂದು ಶಾಲೆಯ ಪ್ರಾಚಾರ್ಯರು ತಿಳಿಸಿದ್ದಾರೆ.ಪ್ರಾತ್ಯಕ್ಷಿಕಾ ವಿಭಾಗಕ್ಕೆ ಪದವಿಪೂವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರು ಈಚೆಗೆ ಭೇಟಿ ನೀಡಿ ಪ್ರೌಢಶಾಲಾ ಮಟ್ಟದಲ್ಲಿ ಐ-ಕೆನ್ ಸೈಟಿಫಿಕಾ ಸ್ಥಾಪಿಸಿರುವ ಶಾಲೆಯ ಪ್ರಯತ್ನವನ್ನು ಶ್ಲಾಘಿಸಿದರು. ದೊಡ್ಡಬಳ್ಳಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಅವಲ್‌ಮೂರ್ತಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ತಯಾರಿಸಿದ ಮಾದರಿ ವೀಕ್ಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry