ಗುರುವಾರ , ಮೇ 6, 2021
26 °C

`ಐ-ಟಾಪರ್' ಟ್ಯಾಬ್ಲೆಟ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಕಂಪೆನಿ `ಆಪ್‌ಥಾಟ್ಸ್' ನೂತನ `ಐ-ಟಾಪರ್' ಎಂಬ ಟ್ಯಾಬ್ಲೆಟ್ ಅನ್ನು ನಗರದಲ್ಲಿ ಗುರುವಾರ ಬಿಡುಗಡೆ ಮಾಡಿದೆ.ಆಪ್‌ಥಾಟ್ಸ್ ನಿರ್ದೇಶಕ ರವಿ ವಿಜ್ಜೇಶ್ವರಾಪು ಮಾತನಾಡಿ, `ರಾಜ್ಯದ ಪಿಯುಸಿ ವಿದ್ಯಾರ್ಥಿಗಳಿಗೆ ಗಣಿತ, ಜೀವವಿಜ್ಞಾನ ಮತ್ತು ರಸಾಯನವಿಜ್ಞಾನ ವಿಷಯಗಳ ಕಲಿಕೆಗೆ ಸಹಾಯಕವಾಗುವಂತೆ ಈ ಉತ್ಪನ್ನವನ್ನು ತಯಾರಿಸಲಾಗಿದೆ. ಇದರ ಬೆಲೆ ರೂ.10,500' ಎಂದರು.`ಈ ಉತ್ಪನ್ನ ಹಲವಾರು ಇನ್ ಬಿಲ್ಟ್ ಅಪ್ಲಿಕೇಶನ್ ಸಹಿತ ಬರುತ್ತಿದೆ. ಕೇಂಬ್ರೀಜ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಪಠ್ಯಕ್ರಮಗಳು ಇದರಲ್ಲಿವೆ. ವಿದ್ಯಾರ್ಥಿಗಳಿಗೆ ಅನಿಯಮಿತ ಅಣಕು ಪರೀಕ್ಷೆಯ ಸೌಲಭ್ಯವನ್ನು ನೀಡುತ್ತದೆ. ಜೆಇಇ, ಇಎಎಂಸಿಇಟಿ ಹಾಗೂ ಎನ್‌ಇಇಟಿ ಪರೀಕ್ಷೆಗೆ ಸಿದ್ಧತೆ ನಡೆಸಲು ಸಹಕರಿಸುತ್ತದೆ' ಎಂದರು.`ಆಪ್‌ಥಾಟ್ಸ್ ಶೈಕ್ಷಣಿಕ ವ್ಯವಸ್ಥೆಗೆ ತಂತ್ರಜ್ಞಾನದ ಚೌಕಟ್ಟನ್ನು ಒದಗಿಸುತ್ತದೆ. ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ನಡುವಿನ ಅಂತರವನ್ನು ಕಡಿವೆು ಮಾಡುತ್ತದೆ. ಸಂಕೀರ್ಣ ವಿಷಯಗಳನ್ನು ಇದು ಸರಳಗೊಳಿಸುತ್ತದೆ' ಎಂದು ಅವರು ತಿಳಿಸಿದರು.

ನಗರದ ಪಿಇಎಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಂ.ಆರ್.ದೊರೆಸ್ವಾಮಿ ಉತ್ಪನ್ನ ಬಿಡುಗಡೆಗೊಳಿಸಿ, `ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೂ ಈ ಉತ್ಪನ್ನ ನೆರವಾಗಬೇಕು' ಎಂದು ಆಶಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.