ಬುಧವಾರ, ನವೆಂಬರ್ 13, 2019
18 °C

`ಐ ಮಿರರ್ ವೇ 2.0' ನಾಟಕ ಪ್ರದರ್ಶನ

Published:
Updated:

ರಂಗದ ಮೇಲೆ ಹೊಸ ನಾಟಕವನ್ನು ಪ್ರಯೋಗಿಸುವಾಗ ಪ್ರತಿ ಸಲವೂ ಸೃಜನಶೀಲತೆ ಹಾಗೂ ನಾವೀನ್ಯ ಮೆರೆಯುವುದು `ವಿಮೂವ್ ಥಿಯೇಟರ್' ತಂಡದ ವೈಶಿಷ್ಟ್ಯ.ಹೊಸತನದ ಮೂಲಕ ಹಲವು ಪ್ರೇಕ್ಷಕರಿಗೆ ರಂಗ ನಾಟಕಗಳ ಗೀಳು ಹತ್ತಿಸಿರುವ ಈ ತಂಡ ದೇಶದ ವಿವಿಧೆಡೆ ಹಲವು ಸೂಕ್ಷ್ಮ ಸಂವೇದಿ ನಾಟಕಗಳನ್ನು ಪ್ರದರ್ಶಿಸಿದ ಅಗ್ಗಳಿಕೆ ಹೊಂದಿದೆ. ಶನಿವಾರ  ಮತ್ತೊಂದು ಹೊಸ ಬಗೆಯ ನಾಟಕದ ಸವಿ ಉಣಿಸುವ ಉತ್ಸಾಹದಲ್ಲಿದೆ ತಂಡ.ಸಾಮಾನ್ಯ ನಾಗರಿಕರ ಅಸಾಮಾನ್ಯ ಕಲ್ಪನೆಗಳನ್ನು ಅತೀ ಸರಳ ರೀತಿಯ ಕಥೆಯಾಗಿ ಹೆಣೆದು, ಅದನ್ನು ನಾಟಕದ ರೂಪದಲ್ಲಿ ರಂಗದ ಮೇಲೆ ತರುವ ವಿಮೂವ್ ಥಿಯೇಟರ್ ಈಗ `ಐ ಮಿರರ್ ವೇ 2.0' ಎಂಬ ಇಂಗ್ಲಿಷ್ ನಾಟಕ ಪ್ರದರ್ಶಿಸಲಿದೆ. ಹೆಸರೇ ಸೂಚಿಸುವಂತೆ ಮಿರರ್ ಎಂದರೇ ಕನ್ನಡಿ. ಅದರ ಸುತ್ತ ಆವರಿಸಿರುವ ನಾಟಕದ ಕಥೆಯು ವಿಭಿನ್ನ. `ಮಿರರ್' ಹಾಗೂ `ಮಿರರ್ ಪ್ರಿಯ'ರ ವಿಭಿನ್ನ ಆಲೋಚನಾ ಲಹರಿಯನ್ನು ಹೊಂದಿರುವ ಹಾಸ್ಯಮಿಶ್ರಿತ ಆಧುನಿಕ ನಾಟಕವಿದು.ಕನ್ನಡಿ ಹಾಗೂ ಅದರೊಂದಿಗೆ ಬೆಳೆದಿರುವ ನಮ್ಮ ಬಿಡಿಸಲಾರದ ನಂಟು, ಆಕಾಂಕ್ಷೆಗಳು, ಮನಸ್ಸಿನ ಉತ್ಪೇಕ್ಷೆಗಳು ಹಾಗೂ ಇವೆಲ್ಲದರ ಜತೆಯಲ್ಲಿ ಕನ್ನಡಿಯ ದೃಷ್ಟಿಯಲ್ಲಿ ನಾವು... ಹೀಗೆ ದಿನನಿತ್ಯದ ಬದುಕಿನ ಸುತ್ತಲಿರುವ ನಮ್ಮ ಹಾಗೂ ಕನ್ನಡಿಯ ಅವಿನಾಭಾವ ಸಂಬಂಧದ ಸುತ್ತಲಿನ ಕಥೆ ಇದಾಗಿದೆ.ಮಧುವಂತಿ ಜಿ. ಬರೆದಿರುವ ಈ ನಾಟಕವನ್ನು ಅಭಿಷೇಕ್ ಅಯ್ಯಂಗಾರ್ ನಿರ್ದೇಶಿಸಿದ್ದಾರೆ. ಅಭಿಷೇಕ್ ನರೈನ್ ಸಂಗೀತ ನೀಡಿದ್ದಾರೆ.

ಸ್ಥಳ ಅಲಯೆನ್ಸ್ ಫ್ರಾನ್ಸೆ, ನಂ.108 ತಿಮ್ಮಯ್ಯ ರೋಡ್, ವಸಂತನಗರ. ಸಂಜೆ 7.30.

ಪ್ರತಿಕ್ರಿಯಿಸಿ (+)