ಐ-ಲೀಗ್ ಫುಟ್‌ಬಾಲ್:ಎಚ್‌ಎಎಲ್-ಬಾಗನ್ ಪಂದ್ಯ ಡ್ರಾ

7

ಐ-ಲೀಗ್ ಫುಟ್‌ಬಾಲ್:ಎಚ್‌ಎಎಲ್-ಬಾಗನ್ ಪಂದ್ಯ ಡ್ರಾ

Published:
Updated:

ಬೆಂಗಳೂರು: ತವರು ನೆಲದ ಪ್ರೇಕ್ಷಕರ ಬೆಂಬಲದೊಂದಿಗೆ ಆಡಲಿಳಿದ ಆತಿಥೇಯ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ ( (ಎಚ್‌ಎಎಲ್) ತಂಡದವರು

ಐ- ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಕೋಲ್ಕತ್ತದ ಮೋಹನ್ ಬಾಗನ್ ಎದುರು ಡ್ರಾ ಪಡೆದರು.ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯವು 1-1ರಲ್ಲಿ ಡ್ರಾದಲ್ಲಿ ಅಂತ್ಯ ಕಂಡಿತು. ಟೂರ್ನಿಯ ಎರಡನೇ ಪಂದ್ಯದಲ್ಲಿ ಎಚ್‌ಎಎಲ್ ತಂಡದಿಂದ ಸೋಲು ಅನುಭವಿಸಿದ್ದ ಮೋಹನ್ ಬಾಗನ್ ತಂಡದವರು ತಿರುಗೇಟು ನೀಡಬೇಕು ಎನ್ನುವ ಕನಸನ್ನು ತವರು ನೆಲದ ಆಟಗಾರರು ವಿಫಲಗೊಳಿಸಿದರು.ಉತ್ತಮ ಆಟವಾಡಿದ ಆತಿಥೇಯ ತಂಡದ ಸ್ಟ್ರೇಕರ್ ಎ. ಹಮ್ಜಾ ಎದುರಾಳಿ ತಂಡದವರ ಗೋಲು ಗಳಿಸುವ ಕೆಲ ಅವಕಾಶಗಳನ್ನು ವಿಫಲ ಮಾಡುವಲ್ಲಿ ಯಶ ಕಂಡರು.35ನೇ ನಿಮಿಷದಲ್ಲಿ ಗೋಲು ಗಳಿಸಿದ ಬಾಗನ್ ತಂಡದ ಸುರ್ಕುಮಾರ್ ಸಿಂಗ್ ತಂಡದ ವಿಶ್ವಾಸವನ್ನು ಹೆಚ್ಚಿಸಿದರು. ಇದರಿಂದ ಒತ್ತಡಕ್ಕೆ ಒಳಗಾದ ಆತಿಥೇಯರು ಸೋಲುವ ಭೀತಿಯಲ್ಲಿದ್ದರು. ಆದರೆ 75ನೇ ನಿಮಿಷದಲ್ಲಿ ಮುರಳಿ ಒಂದು ಗೋಲು ತಂದಿತ್ತು ತಂಡದ ಸೋಲಿನ ಆತಂಕವನ್ನು ದೂರ ಮಾಡಿದರು.ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಗಳಿಸುವ ಅವಕಾಶ ಉಭಯ ತಂಡಗಳ ಆಟಗಾರರಿಗೆ ದೊರೆತಿತ್ತು. ಆದರೆ ಯಾವ ತಂಡದ ಆಟಗಾರರು ಇದರ ಪ್ರಯೋಜನ ಪಡೆದುಕೊಳ್ಳಲಿಲ್ಲ.ಈ ಮೊದಲು 11ನೇ ಸ್ಥಾನದಲ್ಲಿದ್ದ ಎಚ್‌ಎಎಲ್ ಈ ಪಂದ್ಯವನ್ನು ಡ್ರಾ ಮಾಡಿಕೊಂಡು 16 ಪಾಯಿಂಟ್‌ಗಳೊಂದಿಗೆ ಎಂಟನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಕೋಲ್ಕತ್ತದ ಮೋಹನ್ ಬಾಗನ್ ಇದೀಗ ಒಟ್ಟು 21 ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನದಲ್ಲಿದೆ.‘ಬಲಿಷ್ಠ ತಂಡದ ಎದುರು ಆಡುವಾಗ ಆಟದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ತವರು ನೆಲದಲ್ಲಿ ಇದು ಖಂಡಿತಾ ಉತ್ತಮ ಪಂದ್ಯ. ಸೋಲಿನಿಂದ ತಪ್ಪಿಸಿಕೊಂಡು ಕೊನೆಗೆ ಪಾಯಿಂಟ್‌ಗಳನ್ನಾದರೂ ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಎಚ್‌ಎಎಲ್ ತಂಡದ ಮ್ಯಾನೇಜರ್ ಮರಳೀಧರನ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry