ಐ-ಲೀಗ್ ಫುಟ್‌ಬಾಲ್: ಪುಣೆ ತಂಡಕ್ಕೆ ರೋಚಕ ಜಯ

7

ಐ-ಲೀಗ್ ಫುಟ್‌ಬಾಲ್: ಪುಣೆ ತಂಡಕ್ಕೆ ರೋಚಕ ಜಯ

Published:
Updated:
ಐ-ಲೀಗ್ ಫುಟ್‌ಬಾಲ್: ಪುಣೆ ತಂಡಕ್ಕೆ ರೋಚಕ ಜಯ

ಬೆಂಗಳೂರು:  ಸೋಲು...ಸೋಲು...ಸೋಲು. ಇದು ಆತಿಥೇಯ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋಟ್ಸ್ ಕ್ಲಬ್ (ಎಚ್‌ಎಎಸ್‌ಸಿ) ತಂಡದವರನ್ನು ಕಾಡುತ್ತಿರುವ ನಿರಾಸೆ. ಆದರೆ ಭಾನುವಾರದ ಪಂದ್ಯದಲ್ಲಾದರೂ ಸೋಲಿನ ಕಹಿಯಿಂದ ಹೊರಬರಬೇಕು ಎನ್ನುವ ತವರು ನೆಲದ ಆಟಗಾರರ ಆಸೆಗೆ ಫಲ ಲಭಿಸಲಿಲ್ಲ.ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪುಣೆ ಫುಟ್‌ಬಾಲ್ ಕ್ಲಬ್ 2-1ಗೋಲುಗಳಿಂದ ಎಚ್‌ಎಎಲ್ ತಂಡವನ್ನು ಮಣಿಸಿ ಪಾಯಿಂಟ್‌ಗಳ ಸಂಖ್ಯೆಯನ್ನು 29 ಹೆಚ್ಚಿಸಿಕೊಂಡಿತು. ವಿಜಯಿ ತಂಡ ಈ ಮೊದಲು 26 ಪಾಯಿಂಟ್‌ಗಳನ್ನು ಹೊಂದಿತ್ತು.ಚುರುಕಿನ ಆಟವಾಡಿದ ಪುಣೆ ತಂಡದ ಲೆಸ್ಟಿರ್ ಫರ್ನಾಂಡೊ 42ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇನ್ನೊಂದು ಗೋಲನ್ನು ಕೈತಾ ಮಾಂಡೊಜೊವಾ 52ನೇ ನಿಮಿಷದಲ್ಲಿ ತಂದಿತ್ತರು. ಇದರಿಂದ ಒತ್ತಡಕ್ಕೆ ಒಳಗಾದ ಎಚ್‌ಎಎಲ್ ಗೋಲು ಗಳಿಸುವ ಅವಕಾಶಗಳನ್ನು ಪುಣೆ ವಿಫಲಗೊಳಿಸುತ್ತ ಬಂದಿತ್ತು.62ನೇ  ನಿಮಿಷದಲ್ಲಿ ತವರು ನೆಲದ ಆರ್.ಸಿ. ಪ್ರಕಾಶ್ ಮೊದಲ ಗೋಲನ್ನು ಗಳಿಸಿ ಗೆಲುವಿನ ಆಸೆಯನ್ನು ಚಿಗುರಿಸಿದರು. ಆದರೆ ಪುಣೆ ತಂಡ ಅದಕ್ಕೆ ಅವಕಾಶ ನೀಡದೇ ರಕ್ಷಣಾತ್ಮಕ ಆಟವಾಡಿ ಗೆಲುವಿನ ನಗೆ ಬೀರಿತು. ಲೆಸ್ಟಿರ್ ಫರ್ನಾಂಡೊ ‘ಪಂದ್ಯ ಶ್ರೇಷ್ಠ’ ಗೌರವಕ್ಕೆ ಪಾತ್ರರಾದರು.ಎಚ್‌ಎಎಲ್‌ಗೆ ಸತತ ಸೋಲು ಕಾಡುತ್ತಿದೆ. ಹಿಂದಿನ ಪಂದ್ಯಗಳಲ್ಲಿ ಒಎನ್‌ಜಿಸಿ, ಆ್ಯರೋ ಇಂಡಿಯಾ, ಚಿರಾಗ್ ಯುನೈಟೆಡ್, ಏರ್ ಇಂಡಿಯಾ ಎದುರು ಕಂಡಿರುವ ಸೋಲು ಆತಿಥೇಯ ಆಟಗಾರರಲ್ಲಿ ನಿರಾಸೆ ಮೂಡಿಸಿತ್ತು.‘ಗಾಯದ ಸಮಸ್ಯೆ ಬಲವಾಯಿತು’: ನಮ್ಮ ತಂಡದ ಆಟಗಾರರು ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳ ಕಾಲ ಅಭ್ಯಾಸ ಮಾಡುತ್ತಾರೆ. ಆದರೆ ಸರಣಿ ಸೋಲಿನಿಂದ ಹೊರಬರಲು ಆಗುತ್ತಿಲ್ಲ. ನಮ್ಮ ತಂಡಕ್ಕೆ ಪದೇ ಪದೇ ಗಾಯದ ಸಮಸ್ಯೆ ಎದುರಾಗುತ್ತಿದೆ ಎಂದು ಎಚ್‌ಎಎಲ್ ತಂಡದ ಕೋಚ್ ಆರ್. ತ್ಯಾಗರಾಜನ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry