ಮಂಗಳವಾರ, ಅಕ್ಟೋಬರ್ 15, 2019
28 °C

ಐ-ಲೀಗ್ ಫುಟ್‌ಬಾಲ್: ಹೊಸ ವರ್ಷಕ್ಕೆ ಡ್ರಾ ಉಡುಗೊರೆ

Published:
Updated:
ಐ-ಲೀಗ್ ಫುಟ್‌ಬಾಲ್: ಹೊಸ ವರ್ಷಕ್ಕೆ ಡ್ರಾ ಉಡುಗೊರೆ

ಬೆಂಗಳೂರು: ಆತಿಥೇಯ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್  (ಎಚ್‌ಎಎಲ್) ತಂಡದವರು ಸರಣಿ ಸೋಲಿನ ಆಘಾತದಿಂದ ಹೊರ ಬಂದರು. ಇದರಿಂದ ಸ್ಥಳೀಯ ಅಭಿಮಾನಿಗಳು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ಹೊಸ ವರ್ಷದ `ಸವಿ~ ಅನುಭವಿಸಿದರು.ಸಾಲು ಸಾಲು ಸೋಲಿನ ಆಘಾತದಿಂದ ಹೊರ ಬಂದ ಎಚ್‌ಎಎಲ್ ತಂಡ ಐ ಲೀಗ್ ಫುಟ್‌ಬಾಲ್ ಟೂರ್ನಿಯ ಗೋವಾದ ಸ್ಪೋರ್ಟಿಂಗ್ ಕ್ಲಬ್ ಎದುರಿನ 13ನೇ ಸುತ್ತಿನ ಪಂದ್ಯವನ್ನು 2-2ಗೋಲುಗಳಿಂದ ಡ್ರಾ ಮಾಡಿಕೊಂಡಿತು. ಇದರಿಂದ ಆಟಗಾರರ್ಲ್ಲಲಿ ಕಮರಿ ಹೋಗಿದ್ದ ಆತ್ಮ ವಿಶ್ವಾಸ ಮರಳಿ ಬಂದಂತಾಗಿದೆ.ಸ್ಪೋರ್ಟಿಂಗ್ ಕ್ಲಬ್‌ನ ಆಂಥೋನಿ ಡಿಸೋಜ 33ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಇದಕ್ಕೆ ತಕ್ಕ ಪೈಪೋಟಿ ಒಡ್ಡಿದ ಎಚ್‌ಎಎಲ್ ನಾಯಕ ಆರ್. ಸಿ. ಪ್ರಕಾಶ್ 39ನೇ ನಿಮಿಷದಲ್ಲಿ ಗೋಲು ಗಳಿಸಿ ತಿರುಗೇಟು ನೀಡಿದರು. ಇದಾದ ಹತ್ತು ನಿಮಿಷಗಳ ನಂತರ ಆತಿಥೇಯ ತಂಡದ ಗೌತಮ್ ದೇಬನಾಥ್ ಮತ್ತೊಂದು ಗೋಲು ತಂದಿಟ್ಟರು. ಆಗ ತವರು ನೆಲದ ಅಭಿಮಾನಿಗಳಲ್ಲಿ ಸಂಭ್ರಮ.ಈ ಸಂತಸ ಹೆಚ್ಚು ಹೊತ್ತು ಉಳಿಯಲು ಡಿಸೋಜ ಅವಕಾಶ ನೀಡಲಿಲ್ಲ. ಈ ಆಟಗಾರ 52ನೇ ನಿಮಿಷದಲ್ಲಿ ಇನ್ನೊಂದು ಗೋಲು ಗಳಿಸಿ ಸಮಬಲ ಸಾಧಿಸುವಂತೆ ನೋಡಿಕೊಂಡರು. ವಿರಾಮದ ವೇಳೆಗೆ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದ್ದವು.ಈ ಋತುವಿನಲ್ಲಿ ಮೊದಲ ಗೆಲುವು ಪಡೆಯಲು ಎಚ್‌ಎಎಲ್‌ಗೆ ಬುಧವಾರದ ಪಂದ್ಯದಲ್ಲಿ ಅವಕಾಶವಿತ್ತು. ಆದರೆ, ಡಿಫೆಂಡರ್ ಜಗಬ್ ಹಮ್ಜಾ ಮಾಡಿದ ಕೆಲ ಎಡವಟ್ಟುಗಳು ಗೆಲುವಿಗೆ ಅಡ್ಡಿಯಾದವು.

ಬೆಂಗಳೂರಿನಲ್ಲಿ ಮುಂದಿನ ಪಂದ್ಯ: ಫೆಬ್ರವರಿ 1. ಎಚ್‌ಎಎಲ್- ಸಿಕ್ಕಿಂನ ಶಿಲ್ಲಾಂಗ್ ಕ್ಲಬ್.

Post Comments (+)