ಒಂಚೂರು :ಹುಲಿಗೂ ಸೌಟೇಟು

7

ಒಂಚೂರು :ಹುಲಿಗೂ ಸೌಟೇಟು

Published:
Updated:
ಒಂಚೂರು :ಹುಲಿಗೂ ಸೌಟೇಟು

ವನಿತೆಯೊಬ್ಬಳು ಸೌಟೇಟಿನಿಂದಲೇ ಹುಲಿಯನ್ನು ಓಡಿಸಿದ ಮಜವಾದ ಘಟನೆ ಮಲೇಷ್ಯಾದಲ್ಲಿ ನಡೆಯಿತು. ಮನೆಯಲ್ಲಿ ಅವಳು ಅಡುಗೆ ಮಾಡುವುದರಲ್ಲಿ ನಿರತಳಾಗಿದ್ದಳು. ಅಳಿಲುಗಳ ಹಿಡಿಯಲೆಂದು ಗಂಡ ಹೊರಗೆ ಹೋಗಿದ್ದ. ಇದ್ದಕ್ಕಿದ್ದಂತೆ ಅವನ ಚೀರಾಟ ಕೇಳಿಸಿತು.ಸೌಟು ಹಿಡಿದುಕೊಂಡೇ ಹೊರಗೆ ಹೋದ ಅವಳಿಗೆ ಗಂಡನ ಮೇಲೆ ಹುಲಿ ದಾಳಿ ಇಡುತ್ತಿರುವುದು ಕಂಡಿತು. ಹುಲಿಯ ತಲೆಯ ಭಾಗಕ್ಕೆ ಅದರಿಂದ ಅವಳು ಒಂದೇಸಮ ಬಡಿಯತೊಡಗಿದಳು. ಯಾತನೆ ತಾಳಲಾರದೆ ಹುಲಿ ಅಲ್ಲಿಂದ ಓಡಿಹೋಯಿತು.ಮಹಿಳಾ ಸೌಟಿನ ಶಕ್ತಿ ಎಂಥದ್ದಲ್ಲವೇ ಎಂದು ಅವಳ ಗಂಡ ಈ ಘಟನೆಯನ್ನು ಎಲ್ಲಾ ಕಡೆ ಹೇಳಿಕೊಂಡು ಓಡಾಡುತ್ತಿದ್ದಾನಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry