ಗುರುವಾರ , ಜೂನ್ 24, 2021
22 °C

ಒಂಟೆ ಹಾಲಿನ ಐಸ್ ಕ್ರೀಂ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬುಧಾಬಿ(ಪಿಟಿಐ): ಡೈರಿ ಉತ್ಪನ್ನಗಳ ತಯಾರಿಕೆಯಲ್ಲಿ ಮುಂದಿರುವ ಸಂಯುಕ್ತ ಅರಬ್ ಒಕ್ಕೂಟ        (ಯುಎಇ) ಇದೇ ಮೊದಲ ಬಾರಿಗೆ ಒಂಟೆಯ ಹಾಲಿನಿಂದ ಹೊಸ ಬಗೆಯ ಐಸ್ ಕ್ರೀಂ  ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.`ವಿಭಿನ್ನ ರುಚಿ ಹಾಗೂ ಸ್ವಾದದ ಈ ಐಸ್ ಕ್ರೀಂ ತಯಾರಿಸಲು ಹೆಚ್ಚು ಸಮಯವನ್ನು ವ್ಯಯಿಸಿದ್ದೇವೆ~ ಎಂದು ಅಲ್ ಐನ್ ಡೈರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ಲಾ ಸೈಫ್ ಅಲ್ ದರ್ಮಾಕಿ ಹೇಳಿದ್ದಾರೆ.`ಹಸುವಿನ ಹಾಲಿಗಿಂತಲೂ ಸ್ವಲ್ಪ ಹೆಚ್ಚಿನ ಉಪ್ಪಿನಾಂಶವನ್ನು ಹೊಂದಿರುವ ಒಂಟೆ ಹಾಲು, ಅರೇಬಿಯನ್ನರ ಸಾಂಪ್ರದಾಯಿಕ ಆಹಾರ ಕ್ರಮದ ಬಹುಮುಖ್ಯ ಭಾಗ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವಾರು ಸಮೀಕ್ಷೆಗಳಿಂದ ದೃಢಪಟ್ಟಿದೆ.`ನಾಲ್ಕು ರುಚಿಗಳಲ್ಲಿ (ಖರ್ಜೂರ, ಕೇಸರಿ, ಕ್ಯಾರಮೆಲ್ ಹಾಗೂ ಚಾಕೊಲೇಟ್) ಹೊರಬರುವ ಈ ಐಸ್ ಕ್ರೀಂ ತಯಾರಿಕೆಗೆ  ಹಸುವಿನ ಹಾಲಿನ ಐಸ್ ಕ್ರೀಂ ತಯಾರಿಕೆಯ ತಂತ್ರಜ್ಞಾನವನ್ನೇ ಬಳಸಲಾಗುತ್ತದೆ. ಖಂಡಿತವಾಗಿಯೂ ಇದು ಜನಪ್ರಿಯವಾಗಲಿದೆ~ ಎಂದು ದರ್ಮಾಕಿ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.