ಶನಿವಾರ, ಜೂನ್ 12, 2021
24 °C

ಒಂದು ಟ್ರ್ಯಾಕ್ಟರ್‌ನಲ್ಲಿ 38 ಟನ್ ಕಬ್ಬು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದು ಟ್ರ್ಯಾಕ್ಟರ್‌ನಲ್ಲಿ 38 ಟನ್ ಕಬ್ಬು!

ಚಿಕ್ಕೋಡಿ: ಹದಗೆಟ್ಟ ರಸ್ತೆಗಳಲ್ಲಿ ಅಬ್ಬಬ್ಬಾ ಎಂದರೆ 30 ರಿಂದ 35 ಟನ್ ಕಬ್ಬು ಹೇರಿಕೊಂಡು ಹೋಗುವಷ್ಟರಲ್ಲಿಯೇ ಟ್ರ್ಯಾಕ್ಟರ್ ಚಾಲಕರು ಸುಸ್ತಾಗುವುದುಂಟು. ಆದರೆ, 40 ಕಿ.ಮೀ. ದೂರದವರೆಗೆ ಟ್ರ್ಯಾಕ್ಟರ್‌ನ ಎರಡು ಟ್ರೇಲರ್‌ಗಳಲ್ಲಿ 38 ಟನ್ ಕಬ್ಬು ತುಂಬಿಕೊಂಡು ಸಕ್ಕರೆ ಕಾರ್ಖಾನೆಗೆ ಸಾಗಿಸುವ ದಾಖಲೆಯೊಂದು ತಾಲ್ಲೂಕಿನ ಕೋಥಳಿ ಗ್ರಾಮದಲ್ಲಿ ನಡೆದಿದೆ.



ಕೋಥಳಿ ಗ್ರಾಮದ ಸುಶಾಂತ ಪಾಟೀಲ ಅವರ ಗದ್ದೆಯಲ್ಲಿ ಬೆಳೆದ 38 ಟನ್ ಕಬ್ಬನ್ನು ಜಿತೇಂದ್ರ ಪಾಟೀಲ ಅವರ ಜಾನ್ ಡಿಯರ್ ಟ್ರ್ಯಾಕ್ಟರ್‌ನ ಎರಡು ಟ್ರೇಲರ್‌ಗಳಲ್ಲಿ ತುಂಬಿಕೊಂಡು ಮಹಾರಾಷ್ಟ್ರದ ಹುಪರಿಯ ಜವಾಹರ ಶೇತಕರಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ತಲುಪಿಸುವ ಮೂಲಕ ದಾಖಲೆ ನಿರ್ಮಿಸಲಾಗಿದೆ. 40 ಕಿ.ಮೀ. ದೂರದಿಂದ ಕಾರ್ಖಾನೆಗೆ ಒಂದೇ ಟ್ರ್ಯಾಕ್ಟರ್‌ನಲ್ಲಿ 38 ಟನ್‌ಕಬ್ಬು ಸಾಗಿಸಿದವರಲ್ಲಿ ಜಿತೇಂದ್ರ ಪಾಟೀಲ ಮೊದಲಿಗರು ಎನ್ನಲಾಗಿದೆ. ಪದ್ಮಾವತಿ ಕಬ್ಬು ಕಟಾವು ಗ್ಯಾಂಗ್‌ನ ಯುವಕರು ಶ್ರಮವಹಿಸಿ 38 ಟನ್ ಕಬ್ಬು ತುಂಬಿದ್ದು, ಈ ಭಾಗದಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.