ಒಂದು ತಂಡ; ಹಲವು ದೇಶ

7
ಕ್ರಿಕೆಟ್: ಕುಕ್ ಪಡೆಯ ಎಂಟು ಆಟಗಾರರ ಮೂಲ ಇಂಗ್ಲೆಂಡ್ ಅಲ್ಲ

ಒಂದು ತಂಡ; ಹಲವು ದೇಶ

Published:
Updated:
ಒಂದು ತಂಡ; ಹಲವು ದೇಶ

ನಾಗಪುರ: ಒಂದು ತಂಡ; ಹಲವು ದೇಶ. ಇದು ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡವನ್ನು ಒಂದೇ ವಾಕ್ಯದಲ್ಲಿ ವಿಶ್ಲೇಷಿಸಬಹುದು. ಏಕೆ ಗೊತ್ತಾ? ಚೆಂದದ ಆಟದ ಮೂಲಕ ಭಾರತದ ಕ್ರಿಕೆಟ್ ತಂಡವನ್ನು ಕಾಡುತ್ತಿರುವ ಅಲಸ್ಟೇರ್ ಕುಕ್ ಬಳಗದಲ್ಲಿರುವ ಎಂಟು ಮಂದಿ ಆಟಗಾರರ ಮೂಲ ಇಂಗ್ಲೆಂಡ್ ದೇಶ ಅಲ್ಲ!ಇದು ಅಚ್ಚರಿ ಎನಿಸಬಹುದು. ಆದರೆ ನಿಜ. ಹಲವು ದೇಶಗಳ ಆಟಗಾರರನ್ನು ಈ ತಂಡ ಈಗ ಒಳಗೊಂಡಿದೆ. ಈ ತಂಡದ್ಲ್ಲಲೀಗ ಐದು ಮಂದಿ ದಕ್ಷಿಣ ಆಫ್ರಿಕಾ ಮೂಲದ ಆಟಗಾರರಿದ್ದಾರೆ. ಅವರೆಂದರೆ ಕೆವಿನ್ ಪೀಟರ್ಸನ್, ನಿಕ್ ಕಾಂಪ್ಟನ್, ಜೊನಾಥನ್ ಟ್ರಾಟ್, ಸ್ಟುವರ್ಟ್ ಮೀಕರ್ ಹಾಗೂ ವಿಕೆಟ್ ಕೀಪರ್ ಮಟ್ ಪ್ರಯೋರ್. ಇಬ್ಬರು ಭಾರತ ಮೂಲದ ಆಟಗಾರರೂ ಇದ್ದಾರೆ. ಅವರೆಂದರೆ ಸಮಿತ್ ಪಟೇಲ್ ಹಾಗೂ ಮಾಂಟಿ ಪನೇಸರ್. ಎಯೋನ್ ಮಾರ್ಗನ್ ಜನಿಸಿದ್ದು ಐರ್ಲೆಂಡ್‌ನಲ್ಲಿ.ಇವರಲ್ಲಿ ಕೆಲವರು ಕೆಲಸ ಹುಡುಕಿಕೊಂಡು ಇಂಗ್ಲೆಂಡ್‌ಗೆ ವಲಸೆ ಹೋಗಿದ್ದರೆ, ಇನ್ನು ಕೆಲವರು ತಾಯ್ನಾಡಿನ ವ್ಯವಸ್ಥೆಯನ್ನು ಟೀಕಿಸಿ ಹೊರ ನಡೆದವರಿದ್ದಾರೆ. ಅಂಥವರಲ್ಲಿ ಪೀಟರ್ಸನ್ ಪ್ರಮುಖರು. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯನ್ನು ಪ್ರತಿಭಟಿಸಿ ಅವರು ದೇಶ ತೊರೆದಿದ್ದರು.ಈ ಸರಣಿಯಲ್ಲಿ ಆಡಲು ಕಣಕ್ಕಿಳಿಯುತ್ತಿರುವ ಕುಕ್ ಬಳಗದ 11 ಆಟಗಾರರಲ್ಲಿ ಐದು ಮಂದಿ ಮಾತ್ರ ಮೂಲತಃ ಇಂಗ್ಲೆಂಡ್‌ನವರು.`ಹೆಚ್ಚಿನ ಆಟಗಾರರು ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿರುವುದರಿಂದ ಇಂಗ್ಲೆಂಡ್ ತಂಡದತ್ತ ಆಕರ್ಷಿತರಾಗುತ್ತಿದ್ದಾರೆ. ಕೆಲವರು ಕ್ರಿಕೆಟ್ ಆಡುವ ಉದ್ದೇಶದಿಂದಲೇ ತವರು ದೇಶ ತೊರೆದು ಬಂದು ನಿಯಮ ಬದ್ಧವಾಗಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈಗ ತಂಡದಲ್ಲಿರುವ ಪೀಟರ್ಸನ್ ಸೇರಿದಂತೆ ಎಲ್ಲರೂ ಪ್ರತಿಭಾವಂತ ಆಟಗಾರರು' ಎಂದು ಪ್ರವಾಸಿ ತಂಡದ ಮಾಧ್ಯಮ ಮ್ಯಾನೇಜರ್ ರಿಯಾನ್ ಇವಾನ್ಸ್ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ್ದಾರೆ.ದಕ್ಷಿಣ ಆಫ್ರಿಕಾ ಮೂಲದ ಹೆಚ್ಚಿನ ಆಟಗಾರರಿಗೆ ಸ್ಥಾನ ನೀಡುತ್ತಿರುವ ವಿಷಯ ವಿವಾದಕ್ಕೂ ಕಾರಣವಾಗಿದೆ. `ಇಂಗ್ಲೆಂಡ್ ಮೂಲದವರಿಗೆ ಮಾತ್ರ ಅವಕಾಶ ಕೊಡಬೇಕು. ದಕ್ಷಿಣ ಆಫ್ರಿಕಾದವರು ಹಣದ ಉದ್ದೇಶದಿಂದ ದೇಶ ತೊರೆದು ಬರುತ್ತಾರೆ' ಎಂದು ಕೆಲ ದಿನಗಳ ಹಿಂದೆ ಮಾಜಿ ನಾಯಕ ಮೈಕಲ್ ವಾನ್ ಟೀಕಿಸಿದ್ದರು.ಸ್ಥಾನ ಸಿಗದ್ದಕ್ಕೆ ದೇಶ ತೊರೆದ ಕೆವಿನ್

ಡರ್ಬನ್‌ನಲ್ಲಿ ಜನಿಸಿದ ಪೀಟರ್ಸನ್ ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ಟೀಕಿಸಿ 2001ರಲ್ಲಿ ಆ ದೇಶದಿಂದ ಹೊರಬ್ದ್ದಿದಿದ್ದರು. ನತಾಲ್ ಪ್ರಾಂತ್ಯದ ತಂಡ ಪ್ರತಿನಿಧಿಸುತ್ತಿದ್ದ ಅವರಿಗೆ ಆಗ ಸ್ಥಾನ ಲಭಿಸಿರಲಿಲ್ಲ. ಏಕೆಂದರೆ ಆ ದೇಶದ ನಿಯಮದ ಪ್ರಕಾರ ದೇಶಿ ಟೂರ್ನಿಗಳ ಪ್ರತಿ ತಂಡದಲ್ಲಿ ನಾಲ್ವರು ಕಪ್ಪು ವರ್ಣೀಯರಿಗೆ ಕಡ್ಡಾಯವಾಗಿ ಸ್ಥಾನ ನೀಡಬೇಕು.ಈ ಕಾರಣ ಅವರು ಇಂಗ್ಲೆಂಡ್‌ಗೆ ವಲಸೆ ಬಂದರು. ತಾಯಿ ಇಂಗ್ಲೆಂಡ್ ಮೂಲದವರಾಗಿದ್ದರಿಂದ ಆಂಗ್ಲ ಬಳಗವನ್ನು ಪ್ರತಿನಿಧಿಸುವುದು ಕೆವಿನ್‌ಗೆ ಕಷ್ಟವಾಗಲಿಲ್ಲ. ಆದರೆ ಇಂಗ್ಲೆಂಡ್‌ನ ನಿಯಮದಂತೆ ನಾಲ್ಕು ವರ್ಷ ಕೌಂಟಿ ಕ್ರಿಕೆಟ್‌ನಲ್ಲಿ ಆಡಬೇಕಾಯಿತು.`ಕ್ರೀಡೆಯಲ್ಲಿ ಪ್ರತಿಭೆಗೆ ಆದ್ಯತೆ ಇರಬೇಕು. ಮೀಸಲಾತಿಗೆ ಅಲ್ಲ. ಆದರೆ ಚೆನ್ನಾಗಿ ಆಡುತ್ತಿದ್ದ ನನ್ನನ್ನು ಕೈಬಿಟ್ಟರು. ಆ ನೋವಿನಿಂದ ನಾನು ಇಂಗ್ಲೆಂಡ್‌ಗೆ ಹೋಗಲು ತೀರ್ಮಾನಿಸಿದೆ' ಎಂದು ತಮ್ಮ ಆತ್ಮಕಥೆ `ಕ್ರಾಸಿಂಗ್ ದಿ ಬೌಂಡರಿ' ಪುಸ್ತಕದಲ್ಲಿ ಪೀಟರ್ಸನ್ ಈ ವಿಷಯವನ್ನು ಬರೆದುಕೊಂಡಿದ್ದಾರೆ.ಪೀಟರ್ಸನ್ ಮೊದಲ ಬಾರಿ (2005) ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲೆಂಡ್ ಪರ ಆಡಿದಾಗ ಏಕದಿನ ಪಂದ್ಯದಲ್ಲಿ ಶತಕ ಗಳಿಸ್ದ್ದಿದ್ದರು. ಆದರೆ ಅವರು ಪೆವಿಲಿಯನ್‌ಗೆ ಹಿಂತಿರುಗುವಾಗ ಆ ದೇಶದ ಜನರು ಇವರನ್ನು `ದೇಶದ್ರೋಹಿ' ಎಂದು ಕರೆದಿದ್ದರು.ಈಗ ಪೀಟರ್ಸನ್ ಕೈಯಲ್ಲಿರುವ `ಟ್ಯಾಟೊ'ವೊಂದು ಗಮನ ಸೆಳೆಯುತ್ತಿದೆ. ಇಂಗ್ಲೆಂಡ್‌ನ ಲಾಂಛನವಾದ ಮೂರು ಸಿಂಹಗಳ ಚಿತ್ರವದು.`ತಾಯ್ನಾಡಿಗಾಗಿ ಆಡಲು ಪ್ರತಿ ಆಟಗಾರನ ಮನಸ್ಸು ಹಾಗೂ ಹೃದಯ ತುಡಿಯುತ್ತದೆ. ಆದರೆ ಪ್ರತಿಭೆ ಇದ್ದೂ ಸ್ಥಾನ ಸಿಗದಿದ್ದಾಗ ಅದೇ ಮನಸ್ಸು ಹಾಗೂ ಹೃದಯ ವ್ಯವಸ್ಥೆಯನ್ನು ವಿರೋಧಿಸಲು ಮುಂದಾಗುತ್ತದೆ' ಎನ್ನುತ್ತಾರೆ ಪೀಟರ್ಸನ್.ಮಿಂಚುತ್ತಿರುವ ಭಾರತ ಮೂಲದವರು

ಇದುವರೆಗೆ ಭಾರತ ಮೂಲದ 16 ಆಟಗಾರರು ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡ ಪ್ರತಿನಿಧಿಸಿದ್ದಾರೆ. ಅವರಲ್ಲಿ ಇತ್ತೀಚಿನವರೆಂದರೆ ಪನೇಸರ್ ಹಾಗೂ ಸಮಿತ್ ಪಟೇಲ್.`ಭಾರತದ ಮೂಲದ ಆಟಗಾರ ಎನಿಸಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಇದೆ. ಆದರೆ ಈಗ ನಾನು ಇಂಗ್ಲೆಂಡ್ ತಂಡಕ್ಕೆ ಪೂರ್ಣ ಬದ್ಧನಾಗಿದ್ದೇನೆ' ಎಂದು ಆಲ್‌ರೌಂಡರ್ ಸಮಿತ್ ನುಡಿಯುತ್ತಾರೆ. ಅವರ ಪೋಷಕರು ಹಲವು ವರ್ಷಗಳ ಹಿಂದೆ ಕೆಲಸದ ಉದ್ದೇಶ ಇಂಗ್ಲೆಂಡ್‌ಗೆ ವಲಸೆ ಹೋಗಿದ್ದರು. ಆದರೆ ಸಮಿತ್ ಹಾಗೂ ಪನೇಸರ್ ಜನಿಸಿದ್ದು ಇಂಗ್ಲೆಂಡ್‌ನಲ್ಲೇ.ಜೂನಿಯರ್ ತಂಡದಲ್ಲಿ ಆಡಿದ್ದ ಟ್ರಾಟ್: ಟ್ರಾಟ್ ಅವರು ದಕ್ಷಿಣ ಆಫ್ರಿಕಾ 19 ವರ್ಷದೊಳಗಿನವರ ತಂಡ ಪ್ರತಿನಿಧಿಸಿದ್ದರು. ಅವರೀಗ ಇಂಗ್ಲೆಂಡ್ ತಂಡದ ಬೆನ್ನೆಲುಬು ಎನಿಸಿದ್ದಾರೆ. ಕಾಂಪ್ಟನ್ ಈ ಟೆಸ್ಟ್ ಸರಣಿಯ ಅಹಮದಾಬಾದ್‌ನಲ್ಲಿ ಪದಾರ್ಪಣೆ ಮಾಡಿದ್ದರು.ಎರಡು ದೇಶದ ಪರ ಆಡಿದ ಮಾರ್ಗನ್

ಮಾರ್ಗನ್ ಏಕದಿನ ಕ್ರಿಕೆಟ್‌ನಲ್ಲಿ ಎರಡು ದೇಶಗಳನ್ನು ಪ್ರತಿನಿಧಿಸಿದ ಶ್ರೇಯ ಹೊಂದಿದ್ದಾರೆ. ಅವರು 2007ರ ವಿಶ್ವಕಪ್‌ನಲ್ಲಿ ತಮಗೆ ಜನ್ಮ ನೀಡಿದ ಐರ್ಲೆಂಡ್ ಪರ ಹಾಗೂ 2011ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಆಡಿದ್ದರು. ಈಗ ಟೆಸ್ಟ್ ತಂಡದಲ್ಲಿದ್ದಾರೆ.`ಟೆಸ್ಟ್ ಕ್ರಿಕೆಟ್ ಆಡಬೇಕೆಂಬ ಆಸೆಯೇ ನಾನು ತಾಯ್ನಾಡಿನಿಂದ ಇಂಗ್ಲೆಂಡ್‌ಗೆ ತೆರಳಲು ಮುಖ್ಯ ಕಾರಣ. ಐರ್ಲೆಂಡ್‌ಗೆ ಇನ್ನೂ ಟೆಸ್ಟ್ ಸ್ಥಾನಮಾನ ಸಿಕ್ಕಿಲ್ಲ' ಎನ್ನುತ್ತಾರೆ ಮಾರ್ಗನ್.ಇದಷ್ಟೇ ಅಲ್ಲ; ಹೋದ ವರ್ಷ ಇಂಗ್ಲೆಂಡ್ ತಂಡದಲ್ಲಿ ದಕ್ಷಿಣ ಆಫ್ರಿಕಾ ಮೂಲದ ಡರ್ನ್‌ಬಾಕ್, ಮೈಕಲ್ ಲಂಬ್ ಹಾಗೂ ಕೀಸ್‌ವೆಟರ್ ಸ್ಥಾನ ಪಡೆದಿದ್ದರು. ಮಾಜಿ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಕೂಡ ದಕ್ಷಿಣ ಆಫ್ರಿಕಾದವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry