ಒಂದು ದಿನದ ಅಣ್ಣಾ ಧರಣಿ ಆರಂಭ

ಸೋಮವಾರ, ಜೂಲೈ 15, 2019
25 °C

ಒಂದು ದಿನದ ಅಣ್ಣಾ ಧರಣಿ ಆರಂಭ

Published:
Updated:

ನವದೆಹಲಿ, (ಪಿಟಿಐ): ಭ್ರಷ್ಟಚಾರದ ವಿರುದ್ಧ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಯೋಗಗುರು ಬಾಬಾ ರಾಮ್ ದೇವ್ ಮತ್ತು ಅವರ ಸಂಗಡಿಗರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಗ ಶನಿವಾರ ರಾತ್ರಿ ಪೊಲೀಸ್ ಕಾರ್ಯಾಚರಣೆ ನಡೆಸಿ ಅಲ್ಲಿದ್ದ ಅವರನ್ನು ತೆರವು ಮಾಡಿದ ಪ್ರಕರಣವನ್ನು ಪ್ರತಿಭಟಿಸಿ ಅಣ್ಣಾ ಹಜಾರೆ ಮತ್ತು ಅವರ ಬೆಂಬಲಿಗರು ಬುಧವಾರ ಬೆಳಿಗ್ಗೆಯಿಂದ ಇಲ್ಲಿನ ರಾಜ್ ಘಾಟ್ ಬಳಿ ಒಂದು ದಿನದ ಸಾಂಕೆತಿಕ ಧರಣಿ ಆರಂಭಿಸಿದರು.

 ಬುಧವಾರ ಬೆಳಿಗ್ಗೆ 10 .20ಕ್ಕೆ ಧರಣಿ ಆರಂಭಿಸುವ ಮೊದಲು ಅಣ್ಣಾ ಹಜಾರೆ ಅವರು, ರಾಜ್ ಘಾಟ್ ದ ಗಾಂಧಿ ಸಮಾಧಿಗೆ ತೆರಳಿ, ಪುಷ್ಪಗುಚ್ಛವನ್ನಿರಿಸಿ ಗೌರವ ಸಲ್ಲಿಸಿದರು. ಆಗ ಸಾವಿರಾರು ಜನ ಬೆಂಬಲಿಗರು ಹಜಾರೆ ಅವರೊಂದಿಗಿದ್ದರು. ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿ ನೆರೆದಿದ್ದರು.

ಒಂದೇ ಮಾತ್ರಂ, ಭಾರತ್ ಮಾತಾಕಿ ಜೈ ಮತ್ತು ಇನ್ ಕಿಲಾಬ್ ಜಿಂದಾಬಾದ ಎಂದು ಅಣ್ಣಾ ಅವರು ಘೋಷಣೆಗಳನ್ನು ಕೂಗಿದಾಗ ಜನರೂ ಅವರೊಂದಿಗೆ ಧ್ವನಿಗೂಡಿಸಿದರು. ನಾಗರಿಕ ಸಂಘಟನೆಗಳ ಕಾರ್ಯಕರ್ತರಾದ ಶಾಂತಿ ಭೂಷಣ, ಕಿರಣ್ ಬೇಡಿ, ಸ್ವಾಮಿ ಅಗ್ನಿವೇಷ್, ಅರವಿಂದ ಕೇಜ್ರಿವಾಲ್ ಮೊದಲಾದವರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಪೊಲೀಸರು ಜಂತರ್ ಮಂತರ್ ಸುತ್ತ ನಿಷೇಧಾಜ್ಞೆ ಜಾರಿ ಮಾಡಿರುವ ಹಿನ್ನೆಲೆಯಲ್ಲಿ, ಪೊಲೀಸರೊಂದಿಗೆ ಸಂಘರ್ಷ ಬೇಡವೆಂದು ಜಂತರ್ ಮಂತರ್ ಬದಲು ಅಣ್ಣಾ ಹಜಾರೆ ಅವರು ರಾಜ್ ಘಾಟ್ ಬಳಿ  ಈ ಧರಣಿ ನಡೆಸುತ್ತಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry